ಕನ್ನಡ ವಿ.ವಿ. ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವಧಿ ವಿಸ್ತರಣೆ

7

ಕನ್ನಡ ವಿ.ವಿ. ಕುಲಪತಿ ಮಲ್ಲಿಕಾ ಎಸ್‌. ಘಂಟಿ ಅವಧಿ ವಿಸ್ತರಣೆ

Published:
Updated:

ಹೊಸಪೇಟೆ: ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಅವರ ಅಧಿಕಾರದ ಅವಧಿಯನ್ನು ಮುಂದಿನ ಆದೇಶದ ವರೆಗೆ ವಿಸ್ತರಿಸಲಾಗಿದೆ’ ಎಂದು ಕುಲಸಚಿವ ಪಿ. ಮಹಾದೇವಯ್ಯ ತಿಳಿಸಿದ್ದಾರೆ.

‘ರಾಜ್ಯಪಾಲರು ಈ ಕುರಿತು ಆದೇಶ ಹೊರಡಿಸಿದ್ದು, ಕುಲಪತಿಯಾಗಿ ಮಲ್ಲಿಕಾ ಘಂಟಿ ಮುಂದುವರಿಯಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ರಾಜ್ಯಪಾಲರು ಹೊರಡಿಸಿರುವ ಆದೇಶದ ಪ್ರತಿಯನ್ನು ನೀಡುವಂತೆ ‘ಪ್ರಜಾವಾಣಿ’ ಕೇಳಿದಾಗ, ‘ಆ ಪತ್ರ ಮಾಧ್ಯಮಗಳಿಗೆ ಕೊಡಲು ಆಗುವುದಿಲ್ಲ. ಅದರ ಗೌಪ್ಯತೆ ಕಾಪಾಡಿಕೊಳ್ಳಬೇಕಾಗುತ್ತದೆ’ ಎಂದು ಮಹಾದೇವಯ್ಯ ತಿಳಿಸಿದ್ದಾರೆ.

2015ರ ಸೆ. 9ರಂದು ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಲ್ಲಿಕಾ ಘಂಟಿ ಅವರ ಅವಧಿ ಸೆ. 8ರಂದು ಕೊನೆಗೊಂಡಿತ್ತು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !