ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನಾಂಬೆ ದರ್ಶನಕ್ಕೆ ತೆರೆ

Last Updated 9 ನವೆಂಬರ್ 2018, 20:24 IST
ಅಕ್ಷರ ಗಾತ್ರ

ಹಾಸನ: ವರ್ಷಕ್ಕೊಮ್ಮೆ ದರ್ಶನ ಭಾಗ್ಯ ನೀಡುವ ಅಧಿದೇವತೆ ಹಾಸನಾಂಬೆ ಗರ್ಭಗುಡಿ ಬಾಗಿಲನ್ನು ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮುಚ್ಚಲಾಯಿತು. ನ.1 ರಿಂದ 9ರವರೆಗೆ ದೇಗುಲದ ಬಾಗಿಲು ತೆರೆದು ದೇವಿ ದರ್ಶನ ಮಾಡಲು ಅನುವು ಮಾಡಿಕೊಡಲಾಗಿತ್ತು.

ಬಲಿಪಾಡ್ಯಮಿ ಮಾರನೇ ದಿನವಾದ ಶುಕ್ರವಾರ ಮಧ್ಯಾಹ್ನ 1.18 ಕ್ಕೆ ದೇವಿಯ ಗರ್ಭಗುಡಿ ಮುಚ್ಚುತ್ತಿದ್ದಂತೆಯೇ ಭಕ್ತರು ಜಯಘೋಷ ಮೊಳಗಿಸಿದರು.

ಮುಂದಿನ ವರ್ಷ ಅ.17 ರಿಂದ 29 ರ ವರೆಗೆ ಮತ್ತೆ ಹಾಸನಾಂಬೆಯು ಭಕ್ತರಿಗೆ ದರ್ಶನ ನೀಡಲಿದ್ದಾಳೆ. ಜಿಲ್ಲಾಡಳಿತದ ಮಾಹಿತಿ ಪ್ರಕಾರ ಈ ವರ್ಷ ಸುಮಾರು ಮೂರು ಲಕ್ಷ ಭಕ್ತರು ದೇವಿ ದರ್ಶನ ಪಡೆದಿದ್ದಾರೆ.

ಸಂಪ್ರದಾಯದ ಪ್ರಕಾರ ದೇವಿ ಸನ್ನಿಧಿಯಲ್ಲಿ ಹೂವು, ನೈವೇದ್ಯ ಇಟ್ಟು ಹಣತೆ ಹಚ್ಚಲಾಯಿತು. ಮುಜರಾಯಿ ಇಲಾಖೆಯ ವತಿಯಿಂದ ಬೀಗ ಹಾಕಿ ಸೀಲ್‌ ಒತ್ತಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT