ಶನಿವಾರ, ನವೆಂಬರ್ 16, 2019
21 °C

ಎಚ್‌ಡಿಡಿ, ಎಚ್‌ಡಿಕೆ ದೇಹ ಬಂಗಾರ; ಹಿತ್ತಾಳೆ ಕಿವಿ: ಎಲ್‌. ಆರ್‌. ಶಿವರಾಮೇಗೌಡ

Published:
Updated:
Prajavani

ನಾಗಮಂಗಲ (ಮಂಡ್ಯ): ‘ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಎಚ್‌.ಡಿ.ಕುಮಾರಸ್ವಾಮಿ ಅವರ ದೇಹ ಬಂಗಾರ. ಆದರೆ, ಕಿವಿ ಹಿತ್ತಾಳೆಯಾಗಿದ್ದರಿಂದ ಕೆಲ ಭಟ್ಟಂಗಿ ಗಳ ಮಾತು ಕೇಳುತ್ತಾರೆ’ ಎಂದು ಮಾಜಿ ಸಂಸದ ಎಲ್‌.ಆರ್‌.ಶಿವರಾಮೇಗೌಡ ಶನಿವಾರ ಇಲ್ಲಿ ಆಪಾದಿಸಿದರು.

‘ನನ್ನ ಹಾಗೂ ದೇವೇಗೌಡರ ನಡುವೆ ಯಾವುದೇ ಅಸಮಾಧಾನ ಇಲ್ಲ. ನನ್ನನ್ನು ಸಂಸದನನ್ನಾಗಿ ಮಾಡಿದ್ದಕ್ಕಾಗಿ, ಕುಮಾರಸ್ವಾಮಿ ವಿರುದ್ಧ ತುಟಿ ಬಿಚ್ಚದೇ ಇದ್ದೇನೆ’ ಎಂದು ಹೇಳಿದರು.

‘20 ವರ್ಷದಿಂದ ಸಿಗದ ಅಧಿಕಾರವನ್ನು ಜೆಡಿಎಸ್‌ ನನಗೆ ನೀಡಿತು. ಆದ್ದರಿಂದಲೇ ನಾನು ಸಂಸದನಾಗಲು ಸಾಧ್ಯವಾಯಿತು. ಇದಕ್ಕೆ ಕೃತಜ್ಞನಾಗಿರುತ್ತೇನೆ. ದೇವೇಗೌಡರು ಹಲವು ಒಕ್ಕಲಿಗ ನಾಯಕರನ್ನು ಬೆಳೆಸಿದ್ದಾರೆ. ಸದ್ಯಕ್ಕೆ ನನ್ನ ಮುಂದೆ ಯಾವುದೇ ಅವಕಾಶ ಇಲ್ಲ. ಜೆಡಿಎಸ್‌ನಲ್ಲೇ ಇರುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರತಿಕ್ರಿಯಿಸಿ (+)