ಜುಲೈ 5ರಂದು ಬಜೆಟ್: ದೇವೇಗೌಡ

7

ಜುಲೈ 5ರಂದು ಬಜೆಟ್: ದೇವೇಗೌಡ

Published:
Updated:

ಕಾರವಾರ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜುಲೈ 5ರಂದು ಬಜೆಟ್ ಮಂಡನೆ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು. 

ಹೊನ್ನಾವರ ತಾಲ್ಲೂಕಿನ ಇಡಗುಂಜಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, 'ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ 
ಎರಡೂ ಪಕ್ಷದವರು ಹೊಂದಾಣಿಕೆಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ' ಎಂದರು. 

ಹರಕೆ ಸಲ್ಲಿಕೆ:

'ಇಡಗುಂಜಿ ಗಣಪತಿ ದೇವಾಲಯವು ಐತಿಹಾಸಿಕ ಹಾಗೂ ಶಕ್ತಿ ಕೇಂದ್ರವಾಗಿದೆ. ಹಾಗಾಗಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೇನೆ' ಎಂದು ಅವರು ತಿಳಿಸಿದರು.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲು ಅನುಗ್ರಹಿಸುವಂತೆ ದೇವರಿಗೆ ಹೇಳಿಕೊಂಡಿದ್ದ ಹರಕೆಯನ್ನು ದೇವೇಗೌಡ ಅವರು ಸಲ್ಲಿಸಿದರು. ದೇವಸ್ಥಾನದ ಅರ್ಚಕ  ಹಾಗೂ ಜ್ಯೋತಿಷಿ ಮಂಜುನಾಥ್ ಭಟ್ ಅವರಲ್ಲಿ ಸಲಹೆ ಕೇಳಿ ಸಂಕಲ್ಪ ಮಾಡಿ, ಗಣಪತಿ ಹೋಮ ನೆರವೇರಿಸಿದರು.

ಬಳಿಕ ಅವರು, ಸಮೀಪದಲ್ಲೇ ನಡೆಯುತ್ತಿರುವ ಜೆಡಿಎಸ್ ಮುಖಂಡ ಗಣಪಯ್ಯ ಗೌಡ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ಭಾಗವಹಿಸಿದರು.

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !