ಭಾನುವಾರ, ಆಗಸ್ಟ್ 18, 2019
26 °C

ಕೇಂದ್ರ ಸರ್ಕಾರ ತಕ್ಷಣ ₹5 ಸಾವಿರ ಕೋಟಿ ಪರಿಹಾರ ನೀಡಲಿ: ದೇವೇಗೌಡ

Published:
Updated:

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದ ಸುಮಾರು ಎರಡು ಕೋಟಿಯಷ್ಟು ಜನರಿಗೆ ಯೊಂದರೆಯಾಗಿದ್ದು, ಕೇಂದ್ರ ಸರ್ಕಾರ ಮಧ್ಯಂತರ ಪರಿಹಾರ ರೂಪದಲ್ಲಿ ₹5 ಸಾವಿರ ಕೋಟಿ ರೂಪಾಯಿ ನೆರವು ನೀಡಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಆಗ್ರಹಿಸಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು,  ರಾಜ್ಯದ 17 ಜಿಲ್ಲೆಗಳ 80 ತಾಲ್ಲೂಕುಗಳಲ್ಲಿ ತಲೆದೋರಿದ ಪರಿಸ್ಥಿತಿಯನ್ನು ವಿವರಿಸಿದ್ದಾರೆ.

ನೆರೆ ಪರಿಹಾರ ವಿಚಾರದಲ್ಲಿ ರಾಜಕೀಯ ಇಲ್ಲ. ರಾಜ್ಯ ಈಗ ಸಂಕಷ್ಟದಲ್ಲಿದೆ. ಮುಖ್ಯಮಂತ್ರಿ ಅವರ ಕೈ ಬಲಪಡಿಸುವ ಕೆಲಸ ಎಲ್ಲರಿಂದ ನಡೆಯಬೇಕಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

Post Comments (+)