ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದವರ ಭೇಟಿಯಾದ ಸಿಎಂ: ₹ 5 ಲಕ್ಷ ಪರಿಹಾರ

ಭಾನುವಾರ, ಜೂಲೈ 21, 2019
22 °C
ಶವಸಂಸ್ಕಾರಕ್ಕೆ ಸಿಎಂ ಆಹ್ವಾನಿಸಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದ ರೈತ

ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬದವರ ಭೇಟಿಯಾದ ಸಿಎಂ: ₹ 5 ಲಕ್ಷ ಪರಿಹಾರ

Published:
Updated:

ಮಂಡ್ಯ: ಕೆ.ಆರ್‌.ಪೇಟೆ ತಾಲ್ಲೂಕು, ಸಂತೇಬಾಚಹಳ್ಳಿ ಹೋಬಳಿ ಅಘಲಯ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಎ.ಎನ್‌.ಸುರೇಶ್‌ ಅವರ ಕುಟುಂಬದವರನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ಭೇಟಿಯಾದರು.

ಕುಟುಂಬದವರಿಗೆ ಸಾಂತ್ವ ಹೇಳಿದ ಕುಮಾರಸ್ವಾಮಿ ಅವರು, ₹ 5 ಲಕ್ಷ ಪರಿಹಾರ ಧನದ ಚೆಕ್ ವಿತರಿಸಿದರು.

ಇದನ್ನೂ ಓದಿ: ಶವಸಂಸ್ಕಾರಕ್ಕೆ ಸಿ.ಎಂ ಆಹ್ವಾನಿಸಿ ರೈತ ಆತ್ಮಹತ್ಯೆ

‘ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ನನ್ನ ಶವಸಂಸ್ಕಾರಕ್ಕೆ ಬರಬೇಕು, ನಮ್ಮ ಹೋಬಳಿ ವ್ಯಾಪ್ತಿಯ ಕೆರೆ ತುಂಬಿಸಬೇಕು’ ಎಂದು ಮನವಿ ಮಾಡುವ ವಿಡಿಯೊ ಚಿತ್ರೀಕರಿಸಿ ಸುರೇಶ್‌ ತನ್ನ ಜಮೀನಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸೋಮವಾರ ಎರಡು ವಿಡಿಯೊ ದೊರೆತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 6

  Sad
 • 0

  Frustrated
 • 4

  Angry

Comments:

0 comments

Write the first review for this !