ಭಾನುವಾರ, ನವೆಂಬರ್ 17, 2019
24 °C
‘ರಾಜಕೀಯ ನಾಟಕ’

ಬಿಎಸ್‌ವೈ ದೆಹಲಿಗೆ ಹೋಗಿದ್ದು ಅನರ್ಹರ ರಕ್ಷಣೆಗೆ, ಪರಿಹಾರಕ್ಕಾಗಿ ಅಲ್ಲ: ಎಚ್‌ಡಿಕೆ

Published:
Updated:

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನೆರೆ ಪರಿಹಾರ ತರುವುದಕ್ಕೆಂದು ದೆಹಲಿಗೆ ಹೋಗಿಲ್ಲ. ಬದಲಿಗೆ ಅನರ್ಹ ಶಾಸಕರ ರಕ್ಷಣೆಗೆ ಕೇಂದ್ರ ಗೃಹ ಸಚಿವ ಅಮಿತ್  ಶಾ  ಅವರ ಪ್ರಭಾವ ಬಳಸಿಕೊಳ್ಳಲು ಹೋಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ಶಾಸಕ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

ಅಮಿತ್ ಶಾ ಅವರನ್ನು ಭಾನುವಾರ ಬೆಳಿಗ್ಗೆ ಭೇಟಿ ಮಾಡಿದ ಯಡಿಯೂರಪ್ಪ, ಪ್ರವಾಹ ಪರಿಹಾರ ಕುರಿತು ಚರ್ಚಿಸಿದ್ದಾಗಿ ಬಳಿಕ ತಿಳಿಸಿದ್ದಾರೆ.

ಇದನ್ನೂ ಓದಿ: ಅಮಿತ್ ಶಾ ಭೇಟಿ ಮಾಡಿದ ಯಡಿಯೂರಪ್ಪ: ಪ್ರವಾಹ ಪರಿಹಾರ, ಅನರ್ಹ ಶಾಸಕರ ಬಗ್ಗೆ ಚರ್ಚೆ

ಇದಕ್ಕೆ ಪ್ರತಿಯಾಗಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ‘ಆಪರೇಷನ್ ಕಮಲದ ಸಂತ್ರಸ್ತರ ರಕ್ಷಣೆಗಾಗಿ ದೆಹಲಿಗೆ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ನೆರೆ ಸಂತ್ರಸ್ತರ ಪರಿಹಾರ ಧನ ಸಹಾಯ ಕೋರಲು ದೆಹಲಿಗೆ ತರಳಿದ್ದೇನೆ ಎಂದಿರುವುದು ಒಂದು ‘ರಾಜಕೀಯ ನಾಟಕ’. ಅಮಿತ್ ಶಾ ಅವರ ಪ್ರಭಾವ ಬಳಸಿ ಪ್ರಜಾಪ್ರಭುತ್ವ ವಿರೋಧಿ ಆಪರೇಷನ್ ಕಮಲದ ಸಂತ್ರಸ್ತ ಅನರ್ಹರನ್ನು ಬಚಾವ್ ಮಾಡಿಸಲಷ್ಟೇ ಅವರು ದೆಹಲಿಗೆ ಹೋಗಿದ್ದಾರೆ’ ಎಂದು ಟೀಕಿಸಿದ್ದಾರೆ.

ಇನ್ನಷ್ಟು...

ಮೈಸೂರು ಉಪಚುನಾವಣೆ ಸನಿಹದಲ್ಲೇ ಒಡಕು: ಜೆಡಿಎಸ್‌ ಬಿಕ್ಕಟ್ಟು ತಾರಕಕ್ಕೆ

‘ನಮ್ಮ ತಟ್ಟೆಗೆ ಮಣ್ಣು ಬಿದ್ದಿದೆ’: ಊಟಕ್ಕೆ ಕರೆದ ಸಿಎಂಗೆ ಅತೃಪ್ತ ಶಾಸಕರ ಆಕ್ರೋಶ

ಅನರ್ಹ ಶಾಸಕರಿಗೆ ಚುನಾವಣೆ ಸ್ಪರ್ಧಿಸುವ ಅವಕಾಶ ಇಲ್ಲ: ಸಂಜೀವ್ ಕುಮಾರ್

ಪ್ರತಿಕ್ರಿಯಿಸಿ (+)