ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಮುಖಂಡನ ‘ಉಡುಗೊರೆ’ಗೆ ಪೊಲೀಸರ ತಡೆ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಗೌರಿಬಿದನೂರು: ಪಟ್ಟಣದ ಹೊರವಲಯದ ‘ರೇಮಂಡ್ಸ್’ ಸಿದ್ಧ ಉಡುಪು ಕಾರ್ಖಾನೆ ಬಳಿ ಗುರುವಾರ ಸಂಜೆ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಪ್ರಯುಕ್ತ ಮಹಿಳಾ ಉದ್ಯೋಗಿಗಳಿಗೆ ಸ್ಟೀಲ್ ಪಾತ್ರೆ ಮತ್ತು ಲಾಡುಗಳನ್ನು ಹಂಚುತ್ತಿದ್ದ ಬಿಜೆಪಿ ಮುಖಂಡ ಕೆ.ಜೈಪಾಲ್ ರೆಡ್ಡಿ ಅವರನ್ನು ಪೊಲೀಸರು ತಡೆದಿದ್ದಾರೆ.

ಗಾರ್ಮೆಂಟ್ಸ್‌ ಮಹಿಳೆಯರಿಗೆ ನೀಡಲೆಂದೇ ಜೈಪಾಲ್ ರೆಡ್ಡಿ ಅವರು ಸುಮಾರು 3,500 ಟಿಫನ್ ಪಾತ್ರೆ ಮತ್ತು 4,000 ಲಾಡುಗಳನ್ನು ತರಿಸಿ ತಮ್ಮ ಕಚೇರಿಯಲ್ಲಿ ಪ್ಯಾಕ್‌ ಮಾಡಿಸಿ ಸಂಜೆ ವೇಳೆ ಅವುಗಳನ್ನು ಹಂಚಲು ಮುಂದಾಗಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆ ಕಾರ್ಖಾನೆ ಬಳಿ ಬಂದ ಪುರ ಠಾಣೆಯ ಎಸ್‌ಐ ವಿಜಯಕುಮಾರ್ ಅವರು ಜೈಪಾಲ್ ರೆಡ್ಡಿ ಮತ್ತವರ ಬೆಂಬಲಿಗರನ್ನು ಅಲ್ಲಿಂದ ವಾಪಸ್ ಕಳುಹಿಸಿದರು.

ಈ ಕುರಿತು ಜೈಪಾಲ್ ರೆಡ್ಡಿ ಅವರನ್ನು ವಿಚಾರಿಸಿದರೆ, ‘ಗೌರಿಬಿದನೂರು ತಾಲ್ಲೂಕಿನ ಜನರು ನನ್ನ ಮೇಲೆ ವಿಶ್ವಾಸ ಮತ್ತು ನಂಬಿಕೆ ಇಟ್ಟಿದ್ದಾರೆ. ಅವರ ಋಣ ತೀರಿಸಿಕೊಳ್ಳಲು ನಾನು ಸಮಾಜ ಸೇವೆ ಮಾಡುತ್ತಿರುವೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಪೊಲೀಸರ ಮೂಲಕ ಅಡ್ಡಿಪಡಿ ಸುತ್ತಿದ್ದಾರೆ. ಸಂವಿಧಾನಾ ತ್ಮಕವಾಗಿ ಇದು ಸರಿಯಲ್ಲ. ಇದಕ್ಕೆಲ್ಲ ಮುಂದಿನ ದಿನಗಳಲ್ಲಿ ಜನರೇ ಉತ್ತರ ನೀಡಲಿದ್ದಾರೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT