ಬುಧವಾರ, ನವೆಂಬರ್ 13, 2019
23 °C

ಎಚ್‌ಡಿಕೆ ಆರಂಭಿಸಿದ ಸಹಾಯವಾಣಿಗೆ 1,250ಕ್ಕೂ ಅಧಿಕ ಕರೆ

Published:
Updated:

ಬೆಂಗಳೂರು: ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರ ಸ್ವಾಮಿ ಅವರು ಬೆಳೆ ಸಾಲ ಮನ್ನಾ ಕುರಿತು ಮಾಹಿತಿ ನೀಡಲು ಆರಂಭಿಸಿರುವ ಸಹಾಯವಾಣಿಗೆ ಮೊದಲ ದಿನವೇ 1,250ಕ್ಕೂ ಅಧಿಕ ಕರೆಗಳು ಬಂದಿವೆ.

ಸೋಮವಾರ ಬೆಳಿಗ್ಗೆ ಟ್ವೀಟ್‌ ಮಾಡಿದ್ದ ಕುಮಾರಸ್ವಾಮಿ ಅವರು, ‘ನಾನು ರೈತರ ಬೆಳೆ ಸಾಲ ಮನ್ನಾ ಸಹಾಯವಾಣಿ ಆರಂಭಿಸಿದ್ದೇನೆ, ರೈತರು ತಮ್ಮ ಮನೆಯಿಂದಲೇ 9164305868 ನಂಬರ್‌ಗೆ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕರೆ ಮಾಡಿ ಸಾಲಮನ್ನಾದ ವಿವರ ಪಡೆಯಬಹುದು’ ಎಂದು ಹೇಳಿದ್ದರು.

ಪಕ್ಷದ ಐಟಿ ಸೆಲ್‌ ವಿಭಾಗದಿಂದ ಈ ಸಹಾಯವಾಣಿಯನ್ನು ನಿರ್ವಹಣೆ ಮಾಡಲಾಗುತ್ತಿದೆ.

ಪ್ರತಿಕ್ರಿಯಿಸಿ (+)