ಆರೋಗ್ಯ ಸೇವೆಗೆ ಕಾರ್ಡ್‌ ಬೇಕಿಲ್ಲ

7
ಆಧಾರ್‌ ಇದ್ದರೆ ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ : ಸಚಿವ ಶಿವಾನಂದ ಪಾಟೀಲ

ಆರೋಗ್ಯ ಸೇವೆಗೆ ಕಾರ್ಡ್‌ ಬೇಕಿಲ್ಲ

Published:
Updated:

ಬೆಂಗಳೂರು: ಆರೋಗ್ಯ ಕಾರ್ಡ್ ಇಲ್ಲ ಎಂದು ರೋಗಿಗಳು ಹಾಗೂ ಅವರ ಕುಟುಂಬದವರು ಚಿಂತೆ ಪಡಬೇಕಾಗಿಲ್ಲ. ಪಡಿತರ ಚೀಟಿ ಅಥವಾ ಆಧಾರ್‌ ಕಾರ್ಡ್ ಇದ್ದರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗಲಿದೆ.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಶಿವಾನಂದ ಪಾಟೀಲ, ಆರೋಗ್ಯ ಕಾರ್ಡ್ ಇಲ್ಲದಿದ್ದರೂ ಜನರು ಆತಂಕ ಪಡೆಯಬೇಕಿಲ್ಲ. ಕಾರ್ಡ್‌ ಪಡೆಯಲು ಸರದಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇಲ್ಲ. 2019ರ ಮಾರ್ಚ್ ಒಳಗೆ ಎಲ್ಲರಿಗೂ ಕಾರ್ಡ್ ವಿತರಿಸುತ್ತೇವೆ’ ಎಂದರು.

‘ಮೊದಲ ಹಂತದಲ್ಲಿ ಪ್ರಮುಖ 11 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಕಾರ್ಡ್ ನೀಡಲಾಗಿದೆ. ಎರಡನೇ ಹಂತದಲ್ಲಿ ಜಿಲ್ಲಾ ಆಸ್ಪತ್ರೆಗಳು ಸೇರಿದಂತೆ ಪ್ರಮುಖ ಆಸ್ಪತ್ರೆಗಳಲ್ಲಿ ನೋಂದಣಿ ಮಾಡಲಾಗುತ್ತದೆ. ಅಕ್ಟೋಬರ್ ಅಂತ್ಯದ ವೇಳೆಗೆ ತಾಲ್ಲೂಕು ಆಸ್ಪತ್ರೆಗಳಲ್ಲಿ ರೋಗಿಗಳ ನೋಂದಣಿ ಆರಂಭಿಸುತ್ತೇವೆ. ಅರ್ಹರಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಆಧಾರ್ ಕಡ್ಡಾಯ ಮಾಡಲಾಗಿದೆ ಎಂದರು.

ಶಿಫಾರಸು ವಿಧಾನ: ‘ಈ ಯೋಜನೆಯಡಿ ಪ್ರಾಥಮಿಕ ಹಾಗೂ ಸಾಮಾನ್ಯ ದ್ವಿತೀಯ ಆರೋಗ್ಯ ಸೇವೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಷ್ಟೇ ಪಡೆಯಬಹುದು. ನಿರ್ದಿಷ್ಟ ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಹಾಗೂ ತೃತೀಯ ಹಂತದ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಒಂದು ವೇಳೆ ಈ ಆಸ್ಪತ್ರೆಗಳಲ್ಲಿ ಸೌಲಭ್ಯ ಇಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸು ಮಾಡಲಾಗುತ್ತದೆ. ತುರ್ತು ಚಿಕಿತ್ಸೆಗಳಿಗೆ ಯಾವುದೇ ಶಿಫಾರಸಿನ ಅಗತ್ಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಅಂಕಿ ಅಂಶಗಳು

3 ಲಕ್ಷ - ಈವರೆಗೆ ಆರೋಗ್ಯ ಕಾರ್ಡ್ ವಿತರಣೆ
15,643 - ಈ ಯೋಜನೆಯಡಿ ಈವರೆಗೆ ಚಿಕಿತ್ಸೆ ಪಡೆದವರು
33 ಆಸ್ಪತ್ರೆ - ಸೆಪ್ಟೆಂಬರ್‌ 15ರೊಳಗೆ ಈ ಆಸ್ಪತ್ರೆಗಳಲ್ಲಿ ಕಾರ್ಡ್‌ ವಿತರಣೆ

2019ರ ಮಾರ್ಚ್‌ ಎಲ್ಲರಿಗೂ ಆರೋಗ್ಯ ಕಾರ್ಡ್ ವಿತರಣೆ
501 ಆಸ್ಪತ್ರೆಗಳ ಜತೆಗೆ ಒಪ್ಪಂದ

ಫಲಾನುಭವಿಗಳು
*ಅರ್ಹತಾ ರೋಗಿ: ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ರೋಗಿಗಳು ಈ ವರ್ಗದಲ್ಲಿ ಸೇರಿರುತ್ತಾರೆ. ಈ ರೋಗಿಗಳಿಗೆ ಬಹುತೇಕ ಉಚಿತ ಚಿಕಿತ್ಸೆ ಲಭ್ಯ.
*ಸಾಮಾನ್ಯ ರೋಗಿ: ಎಪಿಎಲ್‌ ಪಡಿತರ ಚೀಟಿ ಹೊಂದಿರುವವರು ಅಥವಾ ಯಾವುದೇ ಪಡಿತರ ಚೀಟಿ ಹೊಂದಿಲ್ಲದ ರೋಗಿಗಳು. ಸಾಮಾನ್ಯ ರೋಗಿಗಳಿಗೆ ಸಹ ಪಾವತಿ ಆಧಾರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತದೆ.

ಚಿಕಿತ್ಸಾ ಸೌಲಭ್ಯಗಳು:
*ಬಿಪಿಎಲ್‌ ಕುಟುಂಬಕ್ಕೆ ಐದು ಸದಸ್ಯರ ವರೆಗೆ ನಿರ್ದಿಷ್ಟ ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗೆ ವರ್ಷಕ್ಕೆ ₹30 ಸಾವಿರದ ವರೆಗೆ ಆರ್ಥಿಕ ನೆರವು.
*ತೃತೀಯ ಹಂತದ ಕಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್‌, ನರರೋಗ, ಮೂತ್ರಪಿಂಡದ ಕಾಯಿಲೆ, ಪಾಲಿಟ್ರಾಮ, ಸುಟ್ಟ ಗಾಯ, ನವಜಾತ ಶಿಶುಗಳು ಮತ್ತು ಮಕ್ಕಳ ಕಾಯಿಲೆಗಳಿಗೆ ವರ್ಷಕ್ಕೆ ₹1.50 ಲಕ್ಷ ನೆರವು. ತುರ್ತು ಚಿಕಿತ್ಸಾ ಸಂದರ್ಭ ಬಂದಲ್ಲಿ ಮತ್ತೆ ₹50 ಸಾವಿರ ನೆರವು.
*ಸಾಮಾನ್ಯ ರೋಗಿಗಳಿಗೆ (ಎಪಿಎಲ್‌) ಪ್ಯಾಕೇಜ್‌ ಮೊತ್ತದ ಶೇ 30ರಷ್ಟನ್ನು ಸರ್ಕಾರ ಪಾವತಿ.
*ಆರ್ಥಿಕ ನೆರವನ್ನು ₹5 ಲಕ್ಷಕ್ಕೆ ಏರಿಸಲು ರಾಜ್ಯ ಸರ್ಕಾರದ ಚಿಂತನೆ

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !