ಗುರುವಾರ , ಡಿಸೆಂಬರ್ 12, 2019
25 °C

ವಾಯು ವಿಹಾರಕ್ಕಾಗಿ ವಾಸ್ತವ್ಯ ಸ್ಥಳ ಬದಲು: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ವೈದ್ಯರ ಸಲಹೆಯ ಮೇರೆಗೆ ವಾಸ್ತವ್ಯವನ್ನು ಸರ್ಕಿಟ್‌ ಹೌಸ್‌ನಿಂದ ವಿಟಿಯು ಅತಿಥಿ ಗೃಹಕ್ಕೆ ಸ್ಥಳಾಂತರ ಮಾಡಿದ್ದೇನೆ. ಹೊರತು, ಯಾವುದೇ ವಾಸ್ತು ದೋಷಕ್ಕಾಗಿ ಅಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

‘ಇತ್ತೀಚೆಗೆ ಶಸ್ತ್ರಚಿಕಿತ್ಸೆಯಾಗಿದೆ. ಪ್ರತಿದಿನ ಬೆಳಿಗ್ಗೆ ಕಡ್ಡಾಯವಾಗಿ ವಾಯು ವಿಹಾರ ನಡೆಸುವಂತೆ ವೈದ್ಯರು ಸಲಹೆ ನೀಡಿದ್ದರು. ಇದಕ್ಕೆ ಅನುಗುಣವಾಗಿ ಅಧಿಕಾರಿಗಳು, ವಿಟಿಯು ಅತಿಥಿಗೃಹದಲ್ಲಿ ಉತ್ತಮ ಪರಿಸರವಿದೆ. ವಾಯುವಿಹಾರಕ್ಕೆ ಸಾಕಷ್ಟು ಜಾಗವಿದೆ ಎಂದು ಹೇಳಿದ್ದರು. ಅವರ ಸಲಹೆಯ ಮೇರೆಗೆ ವಾಸ್ತವ್ಯ ಬದಲು ಮಾಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು