ಕಾವೇರಿದ ಸವಾಲ್‌–ಜವಾಬ್‌

7

ಕಾವೇರಿದ ಸವಾಲ್‌–ಜವಾಬ್‌

Published:
Updated:

ರಾಜಧಾನಿಯಲ್ಲಿ ಸೋಮವಾರ ಮೋಡ ಕವಿದ ವಾತಾವರಣದಿಂದ ತಾಪಮಾನ ಸರ‍್ರನೆ ಜಾರಿದ್ದರೆ ವಿಧಾನಸಭೆಯಲ್ಲಿ ಮಾತ್ರ ಕಾವೇರಿದ ವಾತಾವರಣ ಇತ್ತು. ಇದಕ್ಕೆ ಕಾರಣವಾಗಿದ್ದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ವಿರೋಧಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ನಡುವಿನ ವಾಗ್ವಾದ. ಈ ಇಬ್ಬರೂ ನಾಯಕರ ಏಟು - ಎದಿರೇಟಿನ ಝಲಕ್‌...

ಬಿ.ಎಸ್‌. ಯಡಿಯೂರಪ್ಪ ಮಾತು

* ಧರ್ಮಸಿಂಗ್‌ ಅವರ ಸರ್ಕಾರವನ್ನು ಉರುಳಿಸಿ ಅವರಿಗೆ ದ್ರೋಹ ಬಗೆದಿದ್ದಲ್ಲದೆ ಅವರ ಸಾವಿಗೂ ಕಾರಣವಾದವರು ನೀವು

* ದ್ರೋಹಗುಣ ನಿಮ್ಮ ರಕ್ತದಲ್ಲೇ ಸೇರಿಹೋಗಿದೆ. ಧರ್ಮಸಿಂಗ್‌ ಬೆನ್ನಿಗೆ ಚೂರಿ ಹಾಕಿದ್ದಲ್ಲದೆ ನನಗೂ ನಂಬಿಕೆ ದ್ರೋಹ ಮಾಡಿದ್ದೀರಿ. ವಚನ ಕೊಟ್ಟಂತೆ ನಡೆಯುತ್ತೀರಿ ಎಂದು 20 ತಿಂಗಳು ಎಲ್ಲವನ್ನೂ ಸಹಿಸಿಕೊಂಡು ಉಪ ಮುಖ್ಯಮಂತ್ರಿಯಾಗಿದ್ದೆ

* ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ನಿಮ್ಮ ತಂದೆಯ ಬೆಂಬಲ ಇರಲಿಲ್ಲ ಎನ್ನುತ್ತೀರಿ. ಹಾಗಾದರೆ ನನಗೆ ಅಧಿಕಾರ ಹಸ್ತಾಂತರಿಸುವ ಪ್ರಶ್ನೆ ಬಂದಾಗ ಹೋಟೆಲ್‌ನಲ್ಲಿ ನಡೆದ ಸಭೆಗೆ ಅವರೇಕೆ ಶರತ್ತು ಹಾಕಲು ಬಂದಿದ್ದರು?

* ಮಂತ್ರಿ ಸ್ಥಾನಕ್ಕಾಗಿ ನಾನು ಯಾರಲ್ಲೂ ಗೋಗರೆದಿಲ್ಲ. ಅಂತಹ ಸ್ಥಿತಿಯೂ ನನಗೆ ಬಂದಿಲ್ಲ

* ನಿಮ್ಮದೂ ಎಲುಬಿಲ್ಲದ ನಾಲಿಗೆ; ಏನೇನೋ ಹೇಳಬೇಡಿ

ಎಚ್‌.ಡಿ.ಕುಮಾರಸ್ವಾಮಿ ಮಾತು

* ಧರ್ಮಸಿಂಗ್‌ ಅವರ ಸಾವಿಗೆ ನಾನು ಕಾರಣ ಎನ್ನುವುದಾದರೆ ನೀವೂ ಅದರಲ್ಲಿ ಪಾಲುದಾರರು

* ನನ್ನ ರಕ್ತದ ಗುಣದ ಬಗ್ಗೆ ಮಾತನಾಡುತ್ತೀರಲ್ಲ; ಇದೇನು ಸಂಸದೀಯ ಪದವೇ? ಸದನದ ಮೂಲೆಯಲ್ಲಿ ಕುಳಿತಿದ್ದ ನನಗೆ ಸ್ಲಿಪ್‌ ಕೊಟ್ಟು ಕಳುಹಿಸಿ ಮುಖ್ಯಮಂತ್ರಿ ಆಗುವಂತೆ ಒತ್ತಾಯ ಮಾಡಿದ್ದು ನೀವು. ಧರ್ಮಸಿಂಗ್‌ ಅವರಿಗೆ ನೀವೇ ದ್ರೋಹ ಬಗೆದಿದ್ದೀರಿ

* ಸತ್ಯವಾಗಿ ಹೇಳುತ್ತೇನೆ; ನಮ್ಮ ತಂದೆಯವರಿಗೆ ಬಿಜೆಪಿ–ಜೆಡಿಎಸ್‌ ಮೈತ್ರಿ ಸರ್ಕಾರ ರಚನೆಯಾಗಿದ್ದು ಇಷ್ಟವಿರಲಿಲ್ಲ. ಚುನಾವಣೆಗೆ ಹೋಗುವುದೇ ಅವರ ಒಲವಾಗಿತ್ತು. ನನ್ನನ್ನು ದುರುಪಯೋಗ ಮಾಡಿಕೊಂಡವರು ನೀವು

* ನನ್ನನ್ನು ಮಂತ್ರಿ ಮಾಡುವಂತೆ ಗೋಗರೆದವರು ನೀವು. ಅದಕ್ಕಾಗಿ ನನ್ನ ಮುಂದೆ ಬೇಡಿಕೆ ಇಟ್ಟಿದ್ದೂ ಮರೆತುಹೋಯಿತೇ?

* ಎಲುಬಿಲ್ಲದ ನಾಲಿಗೆ ನಿಮ್ಮದು; ಮನಬಂದಂತೆ ಅದನ್ನು ಹರಿ ಬಿಡಬೇಡಿ


ಆರೋಗ್ಯ ಸಚಿವ ಕೆ. ರಮೇಶ್‌ಕುಮಾರ್‌ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದರು ––ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್‌

ರಮೇಶ್‌ಕುಮಾರ್‌ ಕಿವಿಮಾತು

* ಡೈವೋರ್ಸ್‌ ಆದಮೇಲೆ ಮತ್ತೆ ಜಗಳ ಆಡಿಕೊಳ್ಳಬಾರದು. ಆಗ ಸಂಸಾರದ ಗುಟ್ಟೆಲ್ಲ ಬೀದಿಗೆ ಬರುತ್ತದೆ.

ವಯಸ್ಸು ನಮ್ಮ ಹತೋಟಿಗೆ ಸಿಗದಂತೆ ಮುಂದೆ ಹೋಗ್ತಾ ಇರುತ್ತೆ. ನಿಮಗೆ ಪ್ರಮುಖ ಸ್ಥಾನ ಸಿಕ್ಕಿದೆ. ಇಬ್ಬರದೂ ಹಗುರ ವ್ಯಕ್ತಿತ್ವ ಅಲ್ಲ. ಉದ್ವೇಗಕ್ಕೆ ಒಳಗಾಗಬೇಡಿ. ಸ್ಥಾನಕ್ಕೆ ಅಪಚಾರ ತಂದುಕೊಳ್ಳಬೇಡಿ.

-ಕೆ.ಆರ್‌. ರಮೇಶಕುಮಾರ್‌, ವಿಧಾನ ಸಭಾಧ್ಯಕ್ಷ(ಇಬ್ಬರೂ ನಾಯಕರಿಗೆ ಕಿವಿಮಾತು)

* ಇದನ್ನೂ ಓದಿ...

ಕಲಾಪದಲ್ಲಿ ಕಿಡಿ ಹೊತ್ತಿಸಿದ ‘ಧರ್ಮ’ಸಂಕಟ!

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 2

  Sad
 • 0

  Frustrated
 • 3

  Angry

Comments:

0 comments

Write the first review for this !