ಗುರುವಾರ , ನವೆಂಬರ್ 14, 2019
18 °C

ಬೆಳಗಾವಿ ಜಿಲ್ಲೆಯಲ್ಲಿ ರಾತ್ರಿಯಿಡೀ ಮಳೆ

Published:
Updated:
Prajavani

ಬೆಳಗಾವಿ: ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಿಗ್ಗೆವರೆಗೂ ಜೋರು ಮಳೆಯಾಯಿತು. ನಗರವೂ ಸೇರದಿಂತೆ ಅಲ್ಲಲ್ಲಿ ಭಾನುವಾರವೂ ಆಗಾಗ ಸಾಧಾರಣೆ ಮಳೆ ಬಿದ್ದಿತು.

ಧಾರಾಕಾರ ಮಳೆಯಿಂದಾಗಿ ಸವದತ್ತಿ ತಾಲ್ಲೂಕು ಇನಾಮಹೊಂಗಲ ಬಳಿಯ ತುಪರಿ ಹಳ್ಳದ ಸೇತುವೆ ಮತ್ತೆ ಮುಳಗಡೆಯಾಗಿದೆ. ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದ್ದು, ಸವದತ್ತಿ-ಧಾರವಾಡ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ಆಗಸ್ಟ್‌ನಲ್ಲಿ ಸುರಿದ ಮಳೆಯಿಂದಾಗಿ ಮುಖ್ಯ ಸೇತುವೆ ಕುಸಿದಿತ್ತು. ಅದನ್ನು ಈವರೆಗೂ ದುರಸ್ತಿಪಡಿಸಿಲ್ಲ. ಅದರ ಪಕ್ಕದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಲಾಗಿತ್ತು. ಇದು, ವಾರದ ಅವಧಿಯಲ್ಲಿ 2ನೇ ಬಾರಿ ಮುಳುಗಡೆಯಾಗಿದೆ.

ಪ್ರತಿಕ್ರಿಯಿಸಿ (+)