ಚಿಕ್ಕಮಗಳೂರು: ಭಾರಿ ಮಳೆ, ಕೆಲವೆಡೆ ಶಾಲಾ– ಕಾಲೇಜುಗಳಿಗೆ ರಜೆ ಘೋಷಣೆ

7

ಚಿಕ್ಕಮಗಳೂರು: ಭಾರಿ ಮಳೆ, ಕೆಲವೆಡೆ ಶಾಲಾ– ಕಾಲೇಜುಗಳಿಗೆ ರಜೆ ಘೋಷಣೆ

Published:
Updated:

ಬೆಂಗಳೂರು: ಮಲೆನಾಡು ಭಾಗದಲ್ಲಿ ಗುರುವಾರವೂ ಮಳೆ ಮುಂದುವರಿದಿದ್ದು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್‌.ಆರ್‌.ಪುರ, ಮೂಡಿಗೆರೆ ತಾಲ್ಲೂಕುಗಳಲ್ಲಿ ಶಾಲಾ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ತಿಳಿಸಿದ್ದಾರೆ.

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ನಿರಂತರ ಮಳೆ ಸುರಿಯುತ್ತಿದೆ. ನದಿಗಳಲ್ಲಿ ಇನ್ನಷ್ಟು ನೀರು ಏರಿಕೆಯಾಗಿದೆ‌. ಹಾರಂಗಿ ಜಲಾಶಯದ ನೀರಿನ ಹೊರ ಹರಿವನ್ನು 12,388 ಕ್ಯುಸೆಕ್‌ನಿಂದ 18,334 ಕ್ಯುಸೆಕ್‌ಗೆ ಏರಿಕೆ ಮಾಡಲಾಗಿದೆ‌.

ಕಾರವಾರ: ಜಿಲ್ಲೆಯ ಸುತ್ತಮುತ್ತ ಮಳೆ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣ ಮುಂದುವರಿದೆ. 

ಬೀದರ್: ಬುಧವಾರ ರಾತ್ರಿ ಸುರಿದ ಜಿಟಿ ಜಿಟಿ ಮಳೆಗೆ ಬೀದರ್ ತಾಲೂಕಿನ ಕಪಲಾಪುರ ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಾಲಕಿ ಸಾವಿಗೀಡಾಗಿದ್ದಾಳೆ.

ಮನೆಯಲ್ಲಿ ಮಲಗಿದ್ದಾಗ ಮಣ್ಣಿನ ಗೋಡೆ ಕುಸಿದು ಭಾಗ್ಯಶ್ರೀ (8) ಮೃತಪಟ್ಟಿದ್ದಾಳೆ.

ಬರಹ ಇಷ್ಟವಾಯಿತೆ?

 • 11

  Happy
 • 3

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !