ಸೋಮವಾರ, ಸೆಪ್ಟೆಂಬರ್ 16, 2019
27 °C
ರೈಲು ಸಂಚಾರ ರದ್ದು, ಮಾರ್ಗ ಬದಲಾವಣೆ

ನಿರಂತರ ಮಳೆ: ಮಣ್ಣು ತೆರವಿಗೆ ಅಡ್ಡಿ

Published:
Updated:

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಪಡೀಲ್–ಕುಲಶೇಖರ ನಡುವಿನ ರೈಲು ಮಾರ್ಗದ ಮೇಲಿನ ಮಣ್ಣು ತೆರವು ಕಾರ್ಯಾಚರಣೆಗೆ ತೊಂದರೆಯಾಗಿದೆ. ಇದರಿಂದಾಗಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇದೇ 25 ರಂದು ಹೊರಡಬೇಕಿದ್ದ ಎರ್ನಾಕುಲಂ–ಮುಂಬೈ ಲೋಕಮಾನ್ಯ ತಿಲಕ (ರೈ.ಸಂ. 12224) ದುರಂತೋ ಎಕ್ಸ್‌ಪ್ರೆಸ್‌ ಹಾಗೂ ಕೂಚುವೇಲಿ–ಮುಂಬೈ ಲೋಕಮಾನ್ಯ ತಿಲಕ (ರೈ.ಸಂ. 12202) ಗರೀಬ್ ರಥ ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಇದೇ 25 ರಂದು ಹೊರಡಲಿರುವ ತಿರುವನಂತಪುರ–ಮುಂಬೈ ಲೋಕಮಾನ್ಯ ತಿಲಕ (ರೈ.ಸಂ. 16346) ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲು ಶೋರನೂರು, ಪೊಡನೂರು, ಈರೋಡ್‌, ಜೋಲಾರಪೆಟ್ಟಿ, ಮೆಲಪ್ಪಾಕಂ, ರೇಣಿಗುಂಟಾ, ವಾಡಿ, ದೌಂಡ್‌, ಪುಣೆ, ಲೋನಾವಾಲ, ಕಲ್ಯಾಣ ಮಾರ್ಗವಾಗಿ ಸಂಚರಿಸಲಿದೆ. ಎರ್ನಾಕುಲಂ–ನಿಜಾಮುದ್ದೀನ್‌ (ರೈ.ಸಂ. 12617) ಮಂಗಲ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ರೈಲು, ಶೋರನೂರ, ಪೊಡನೂರು, ಈರೋಡ್‌, ಜೋಲಾರಪೆಟ್ಟಿ, ಕಟಪಾಡಿ, ಅರಕ್ಕೋಣಂ, ಪೆರಂಬೂರು, ಗುಡೂರು, ನಾಗ್ಪುರ್‌, ಇಟಾರ್ಸಿ, ಝಾನ್ಸಿ, ಆಗ್ರ ಕಾಂಟೋನ್ಮೆಂಟ್‌, ಮಥುರಾ ಮೂಲಕ ಸಂಚರಿಸಲಿದೆ.

ಶನಿವಾರ ಮಂಗಳೂರಿನ ಮೂಲಕ ಸಂಚರಿಸಬೇಕಿದ್ದ ಕೊಯಿಮತ್ತೂರು–ಹಿಸಾರ್‌ (ರೈ.ಸಂ. 22476) ಎಸಿ ಎಕ್ಸ್‌ಪ್ರೆಸ್‌ ರೈಲಿನ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದ್ದು, ಈರೋಡ್‌, ಜೋಲಾರಪೆಟ್ಟಿ, ಕಟಪಾಡಿ, ರೇಣಿಗುಂಟಾ, ಗುಡೂರು, ವಾರ್ಧಾ, ಭೂಸಾವಳ, ಜಳಗಾಂವ, ಉಧನಾ, ಸೂರತ್‌ ಮೂಲಕ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.

Post Comments (+)