ಬುಧವಾರ, ಆಗಸ್ಟ್ 21, 2019
22 °C
ಶೇ 8 ಕ್ಕೆ ಇಳಿದ ಮಳೆ ಕೊರತೆ, ದಕ್ಷಿಣ ಒಳನಾಡಿಗೆ ಕೃಪೆ ತೋರದ ವರುಣ

ಬರ ಪ್ರದೇಶಕ್ಕೂ ವ್ಯಾಪಿಸಿದ ಮಳೆ

Published:
Updated:

ಬೆಂಗಳೂರು: ಮುಂಗಾರು ಆರಂಭದಲ್ಲಿ ಮಳೆ ಕೊರತೆಯಿಂದಾಗಿ ಕಂಗೆಟ್ಟು ಕುಳಿತಿದ್ದ ರಾಜ್ಯದ ಜನತೆ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬರದ ಛಾಯೆಯಿಂದ ಹೊರಬರುವ ಲಕ್ಷಣಗಳು ಗೋಚರಿಸುತ್ತಿವೆ.

ಕರಾವಳಿ ಮತ್ತು ಮಲೆನಾಡಿನ ಅಕ್ಕಪಕ್ಕದ ಜಿಲ್ಲೆಗಳಿಗೂ ಮಳೆ ವ್ಯಾಪಿಸಿದೆ. ಮಳೆ ಕೊರತೆಯಿದ್ದ ಜಿಲ್ಲೆಗಳಲ್ಲೂ ಈಗ ತಂಪಾದ ವಾತಾವರಣವಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಮಳೆಯಾಗಿದೆ. ಮಳೆಯ ಕೊರತೆ ಪ್ರಮಾಣ ಶೇ 47ರಿಂದ ಶೇ 8ಕ್ಕೆ ಇಳಿಕೆಯಾಗಿದೆ.

ದಕ್ಷಿಣ ಒಳನಾಡಿನ ಜಿಲ್ಲೆಗಳು ಅಂದರೆ, ಹಳೆ ಮೈಸೂರು ಭಾಗದಲ್ಲಿ ಮಳೆಯ ಕೊರತೆ ಶೇ 22 ರಷ್ಟು ಇದೆ. ಉತ್ತರ ಒಳನಾಡಿನಲ್ಲಿ ಕೊರತೆ ಶೇ 6ಕ್ಕೆ ಇಳಿಕೆಯಾಗಿದ್ದರೆ, ಮಲೆನಾಡಿನಲ್ಲಿ ಶೇ 21 ಮತ್ತು ಕರಾವಳಿಯಲ್ಲಿ ಶೇ 4ಕ್ಕೆ ತಗ್ಗಿದೆ.

ಮುಂದಿನ ನಾಲ್ಕು ದಿನ ಭಾರಿ ಮಳೆ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇದೇ 10 ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಶನಿವಾರದವರೆಗೆ ಭಾರಿ ಮಳೆಯಾಗಲಿದೆ.

ಮುಂದಿನ ನಾಲ್ಕು ದಿನ ಭಾರಿ ಮಳೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇದೇ 10 ರವರೆಗೆ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಶನಿವಾರದವರೆಗೆ ಭಾರಿ ಮಳೆಯಾಗಲಿದೆ.

Post Comments (+)