ಗುರುವಾರ , ಆಗಸ್ಟ್ 22, 2019
22 °C

ಮನೆ ಕುಸಿತ: ವ್ಯಕ್ತಿ ಸಾವು

Published:
Updated:

ನೇಸರಗಿ: ತೀವ್ರವಾಗಿ ಸುರಿದ ಮಳೆಯಿಂದಾಗಿ ಬೈಲಹೊಂಗಲ ತಾಲ್ಲೂಕಿನ ಹೊಸಕೋಟಿ ಗ್ರಾಮದಲ್ಲಿ ಮನೆ ಕುಸಿದು, ನಾಗಪ್ಪ ಯಲ್ಲಪ್ಪ ಮಾದಾರ (35) ಮೃತರಾಗಿದ್ದಾರೆ. 

ಸೋಮವಾರ ಸಂಜೆ ಮಳೆ ತೀವ್ರವಾಗಿ ಸುರಿಯುತ್ತಿತ್ತು. ಕೊಟ್ಟಿಗೆಯೊಳಗೆ ಕಟ್ಟಿದ್ದ ಎತ್ತುಗಳನ್ನು ಬಿಡಿಸಲು ಹೋಗಿದ್ದ ನಾಗಪ್ಪ ಅವರ ಮೇಲೆ ಮನೆ ಕುಸಿದುಬಿದ್ದಿತು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಅವರು ಕೊನೆಯುಸಿರೆಳೆದರು.

 

 

Post Comments (+)