ಮಂಗಳವಾರ, ಆಗಸ್ಟ್ 20, 2019
21 °C
ಕೊಡಗಿನಲ್ಲಿ ಮಳೆ ಅಬ್ಬರ

ಕೊಡಗು - ಕೇರಳ ಅಂತರ ರಾಜ್ಯ ಹೆದ್ದಾರಿ ಬಂದ್ 

Published:
Updated:

ಮಡಿಕೇರಿ: ಕೊಡಗು‌ ಜಿಲ್ಲೆಯಾದ್ಯಂತ ಮಳೆ ಆರ್ಭಟಿಸುತ್ತಿದೆ. ಭಾಗಮಂಡಲ ಜಲಾವೃತವಾಗಿದ್ದು, ಭಾಗಮಂಡಲ- ನಾಪೋಕ್ಲು‌ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ವಾಹನ ಸಂಚಾರ ಸ್ಥಗಿತವಾಗಿದೆ. 

ಕೊಡಗಿನಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಅಂತರ ರಾಜ್ಯ ಹೆದ್ದಾರಿಯ ವಾಟೆಕೊಲ್ಲಿ (ಪೆರುಂಬಾಡಿ - ಮಾಕುಟ್ಟ) ಎಂಬಲ್ಲಿ ರಸ್ತೆ ಕುಸಿತವಾಗಿದ್ದು ವಾಹನ ಸಂಚಾರ ಬಂದ್ ಆಗಿದೆ. ಕಳೆದ ವರ್ಷವೂ ಈ ಮಾರ್ಗದಲ್ಲಿ ಭೂಕುಸಿತ ಸಂಭವಿಸಿ, ಮೂರು ತಿಂಗಳು‌ ವಾಹನ ಸಂಚಾರ ಬಂದ್ ಆಗಿತ್ತು. 

ಕೇರಳಕ್ಕೆ ತೆರಳುವ ವಾಹನಗಳು ಗೋಣಿಕೊಪ್ಪಲು, ಪೊನ್ನಂಪೇಟೆ, ಕುಟ್ಟ ಮಾರ್ಗವಾಗಿ ಕೇರಳಕ್ಕೆ ತೆರಳುತ್ತಿವೆ.
ಮಡಿಕೇರಿ, ಜೋಡುಪಾಲ, ಕಾಟಕೇರಿ, ಅಪ್ಪಂಗಳ, ವಿರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ ವ್ಯಾಪ್ತಿಯಲ್ಲಿ ರಾತ್ರಿಯಿಡೀ ಭಾರಿ ಮಳೆ ಸುರಿದಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥದಲ್ಲಿ ಅಪಾರ‌ ಪ್ರಮಾಣದ ನೀರು ಹರಿಯುತ್ತಿದೆ.

Post Comments (+)