ಭಾರಿ ಮಳೆ: ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

7

ಭಾರಿ ಮಳೆ: ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ

Published:
Updated:

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ಈ ಭಾಗದ ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲ್ಲೂಕಿನ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ತಿಳಿಸಿದ್ದಾರೆ.

ಮಡಿಕೇರಿ: ಮುಂದಿನ 24 ಗಂಟೆಯಲ್ಲಿ ಕೊಡಗಿನಲ್ಲಿ ಬಿರುಸಿನ ಮಳೆಯಾಗುವ ಮುನ್ಸೂಚನೆಯಿದ್ದು, ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳಿಗೆ ಆ. 13ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ‌ ಪಿ.ಐ. ಶ್ರೀವಿದ್ಯಾ ಅವರು ಆದೇಶಿಸಿದ್ದಾರೆ.

ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ನದಿ, ತೊರೆಗಳಿಗೆ ಇಳಿಯದೇ ಸುರಕ್ಷಿತ‌ ಸ್ಥಳಗಳಲ್ಲಿ ನಿಂತು ವೀಕ್ಷಣೆ ಮಾಡುವಂತೆ ಜಿಲ್ಲಾಡಳಿತ ಕೋರಿದೆ.

ನದಿಪಾತ್ರದ‌ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಸಾರ್ವಜನಿಕರು ಹಾಗೂ ಪ್ರವಾಸಿಗರು ಮರದ ಕೆಳಗೆ‌ ಹಾಗೂ ಬೆಟ್ಟಗಳ ಮೇಲೆ ವಾಹನಗಳನ್ನು‌ ನಿಲುಗಡೆ ಮಾಡಬಾರದು. ಅಪಾಯಕಾರಿ ಸೇತುವೆಗಳ ಮೇಲೆ ಸಂಚರಿಸದಂತೆ ಮನವಿ ಮಾಡಲಾಗಿದೆ.
ಸಹಾಯವಾಣಿ ಕೇಂದ್ರ‌ ತೆರೆಯಲಾಗಿದ್ದು, ದೂರವಾಣಿ: 08272 221077 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !