ಅಪಾಯ ಮಟ್ಟ ಮೀರಿದ ಕಪಿಲಾ; ನಂಜನಗೂಡು-ಮೈಸೂರು ಹೆದ್ದಾರಿ ಬಂದ್

7

ಅಪಾಯ ಮಟ್ಟ ಮೀರಿದ ಕಪಿಲಾ; ನಂಜನಗೂಡು-ಮೈಸೂರು ಹೆದ್ದಾರಿ ಬಂದ್

Published:
Updated:

ಮೈಸೂರು: ‌ ನೆರೆಯ ಕೇರಳದ ವೈನಾಡಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕಬಿನಿ ಜಲಾಶಯದ ಒಳಹರಿವು ತೀವ್ರ ಹೆಚ್ಚಳವಾಗಿದ್ದು ಕಪಿಲಾ ನದಿ ಅಪಾಯ‌ದ ಮಟ್ಟ ಮೀರಿ ಹರಿಯುತ್ತಿದೆ. 

ಮೈಸೂರು-ನಂಜನಗೂಡು ನಡುವಿನ ರಾಷ್ಟ್ರೀಯ ಹೆದ್ದಾರಿ ಕಪಿಲಾ ನದಿ ನೀರಿನಿಂದ ಮುಳುಗಿದ್ದು, ಸಂಚಾರ ಸಂಪೂರ್ಣ ಬಂದ್ ಆಗಿದೆ. ರಸ್ತೆಯಲ್ಲಿ 2 ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. 

ಬಸವನಪುರ-ಕೆಂಪಿಸಿದ್ದನಹುಂಡಿ ಮಾರ್ಗವಾಗಿ ಪರ್ಯಾಯ ಮಾರ್ಗದಲ್ಲಿ ವಾಹನಗಳು ಸಂಚರಿಸುತ್ತಿವೆ. ತಗ್ಗು ಪ್ರದೇಶಗಳ 10 ಮನೆಗಳು ಜಲಾವೃತಗೊಂಡಿದ್ದು, ಸಂತ್ರಸ್ಥರಿಗಾಗಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. 

ನಗರದ ಮೈಸೂರು ರಸ್ತೆಯ ಮಲ್ಲನಮೂಲೆ ಮಠದ ಬಳಿಯ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಂಜನಗೂಡಿನ ಕುಳ್ಳಂಕನಹುಂಡಿ ಹಾಗೂ ಪಟ್ಟಣದ ಮೇದರ ಕೇರಿ ಶಾಲೆಗಳಿಗೆ ರಜೆ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !