ಕೊಡಗಿನ ನೆರೆ ಪೀಡಿತರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತಲ್ಲೀನ ಈ ಮನ್ಸೂರ್ ಅಲಿ

7

ಕೊಡಗಿನ ನೆರೆ ಪೀಡಿತರಿಗೆ ಸಹಾಯ ಮಾಡುವ ಕಾರ್ಯದಲ್ಲಿ ತಲ್ಲೀನ ಈ ಮನ್ಸೂರ್ ಅಲಿ

Published:
Updated:

ಕೊಡಗು: ಕಳೆದ ಮೂರು ದಿನಗಳಿಂದ ಮನ್ಸೂರ್ ಅಲಿ ಅವರ ಫೋನ್ ಸತತವಾಗಿ ರಿಂಗಾಗುತ್ತಿದೆ. ಕುಡಿಯವ ನೀರಿನ ವ್ಯಾಪಾರಿಯಾಗಿರುವ ಮನ್ಸೂರ್ ಕೊಡಗಿನಲ್ಲಿ ಮಳೆ ಬಿರುಸಾಗಿನಿಂದ ತಮ್ಮ ಅಂಗಡಿ ಮುಚ್ಚಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಮಂಚೂ ಭಾಯಿ ಎಂದು ಕರೆಯಲ್ಪಡುವ ಮನ್ಸೂರ್ ಮತ್ತು ಆತನ ಗೆಳೆಯರು ನಡೆಸುತ್ತಿರುವ ರಕ್ಷಣಾ ಕಾರ್ಯದ ಬಗ್ಗೆ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

ನಾನು ಎಷ್ಟು ಮಂದಿಗೆ ನೆರವಾಗಿದ್ದೇನೆ ಎಂಬುದರ ಲೆಕ್ಕ ಇಟ್ಟುಕೊಂಡಿಲ್ಲ ಎನ್ನುವ ಮನ್ಸೂರ್, ತಮ್ಮ ಜೀಪ್‍ನಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ತೊಡಗಿ ಅಲ್ಲಿನ ಜನರನ್ನು ರಕ್ಷಣೆ ಮಾಡುತ್ತಿದ್ದಾರೆ. ಮಳೆ ಹಾಗೂ ಭೂಕುಸಿತದಿಂದ ತತ್ತರಿಸಿರುವ ಮುಕ್ಕಂದೂರು ಮತ್ತು ಮುಕ್ಕೋಡ್ಲು ಪ್ರದೇಶಕ್ಕೆ ತೆರಳಿ ಅಲ್ಲಿರುವ ನೂರಾರು ಮಂದಿಯನ್ನು ರಕ್ಷಿಸಿದ್ದಾರೆ ಇವರು.

ಮೂರು ವಾರಗಳ ಹಿಂದೆ ನಾನು ಜನರಿಗೆ ಸಹಾಯ ಮಾಡಲು ತೊಡಗಿದ್ದೆ. ಇಲ್ಲಿನ ಪರಿಸ್ಥಿತಿ ತೀವ್ರವಾಗುತ್ತಿದ್ದಂತೆ ನಾನು ನನ್ನ ಅಂಗಡಿ ಮುಚ್ಚಿ ಜನರ ಸಹಾಯ ಕಾರ್ಯದಲ್ಲಿ ತೊಡಗಿದೆ. ವಾಟ್ಸ್ ಆ್ಯಪ್ ಮತ್ತು ಫೇಸ್  ಬುಕ್‍ನಲ್ಲಿ ನನ್ನ ಮೊಬೈಲ್ ಸಂಖ್ಯೆ  ಶೇರ್ ಆಗಿದೆ, ನನಗೆ ಪರಿಚಯವೇ ಇಲ್ಲದ ಮಂದಿಗೆ ಸಹಾಯ ಮಾಡಿದ್ದೇನೆ. ನಮ್ಮಿಂದ ಸಾಧ್ಯವಾದಷ್ಟು ಮಂದಿಯನ್ನು ನಾವು ರಕ್ಷಣೆ ಮಾಡಿದ್ದೇವೆ.  ಮುಕ್ಕೊಡ್ಲು ಬೆಟ್ಟದಲ್ಲಿ ನಿಂತು ಕೆಲವು ಮಂದಿ ಸಹಾಯ ಯಾಚಿಸುತ್ತಿದ್ದರು. ಅವರತ್ತ ತೆರಳಲು ನಮಗೆ ಸಾಧ್ಯವಾಗಲಿಲ್ಲ, ಅಲ್ಲಿ ಏರ್ ಲಿಫ್ಟ್ ಮಾತ್ರ ಸಾಧ್ಯ, ಅಲ್ಲಿಗೆ ಹೋಗುವ ದಾರಿಯೂ ಭೂ ಕುಸಿತದಿಂದಾಗಿ ಮುಚ್ಚಿಹೋಗಿದೆ.

ಶುಕ್ರವಾರ ತಡರಾತ್ರಿ 2 ಗಂಟೆಗೆ ನಂದಿ ಮೊಟ್ಟೆಯಲ್ಲಿರುವ ಶಾಲೆಯೊಂದರಿಂದ ಕರೆ ಬಂದಿತ್ತು. ಸುಮಾರು 60 ಮಂದಿ ಅಲ್ಲಿ ಸಿಲುಕಿಕೊಂಡಿದ್ದಾರೆ ಎಂದು. ಆದರೆ ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ, ಬೆಳಗ್ಗೆ ಅವರು ಸುರಕ್ಷಿತರಾಗಿದ್ದಾರೆ ಎಂಬ ಸಂದೇಶ ಬಂತು. ಜನರನ್ನು ರಕ್ಷಿಸುವುದರ ಜತೆಗೆ ನೆರೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ನಿರಾಶ್ರಿತರಾಗಿರುವ ಜನರಿಗೆ ಆಪ್ತ ಸಮಾಲೋಚನೆಯನ್ನೂ ಮಾಡುತ್ತಿದ್ದಾರೆ ಈ ಮನ್ಸೂರ್.

ದೇವರು ನನ್ನನ್ನು ಮತ್ತು ನನ್ನ ಕುಟುಂಬವನ್ನು ರಕ್ಷಿಸಿದ್ದಾನೆ. ಈಗ ನಾನು ಬೇರೆಯವರಿಗೆ  ಸಹಾಯ ಮಾಡಬೇಕಿದೆ ಎನ್ನುವ ಮನ್ಸೂರ್ ಜತೆ ಮಡಿಕೇರಿಯ ಇಂದಿರಾ ನಗರದ ನಿವಾಸಿ ಗಣೇಶ್ ಕೂಡಾ ಸಹಾಯ ಮಾಡುತ್ತಿದ್ದಾರೆ. ನಾನು ಎಲ್ಲವನ್ನೂ ಕಳೆದುಕೊಂಡೆ. ಈಗ ನನ್ನಿಂದಾದ ಸಹಾಯವನ್ನು ಮಾಡುತ್ತಿದ್ದೇನೆ ಅಂತಾರೆ ಗಣೇಶ್.

ಇಂದಿರಾ ನಗರ್, ಚಾಮುಂಡೇಶ್ವರಿ ನಗರ್, ತ್ಯಾಗರಾಜ ಕಾಲೊನಿ ಮತ್ತು ಡೈರಿ ಫಾರ್ಮ್ ನಲ್ಲಿರುವ ಜನರನ್ನು ನಿರಾಶ್ರಿತರ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಕೊಪ್ಪ ಜಂಕ್ಷನ್‍ನಲ್ಲಿ ನನ್ನ ರೆಸಾರ್ಟ್ ಇದೆ. 200 ಕ್ಕಿಂತ ಹೆಚ್ಚು ಮಂದಿಗೆ ನಾನು ಸೂರು ನೀಡಬಲ್ಲೆ ಎಂದು ಕುಶಾಲನಗರದ ನಿವಾಸಿ ದಾವೂದ್ ಹೇಳಿದ್ದಾರೆ. ದಾವೂದ್ ಅವರ ರೆಸಾರ್ಟ್ ಹೆಸರು ಡ್ರೀಮ್ಸ್ ಕಿಂಗ್ಸ್ ವೇ.

ಕೊಡಗಿನಲ್ಲಿ ಸಹಾಯಕ್ಕಾಗಿ ಕರೆ ಮಾಡಿ

ಕೊಡಗು - 08272 221077

ಉಡುಪಿ - 0820 2574802

ದಕ್ಷಿಣ ಕನ್ನಡ- 0824 2220590

ಹಾಸನ - 08172 261111

ಶಿವಮೊಗ್ಗ - 08182 225410

ಮನ್ಸೂರ್ -  +91 9449990147

ದಾವೂದ್ - +91 9945375180
 

 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !