ಹೇಮಾವತಿ: ಶಾಸಕರ ಜಟಾಪಟಿ

7

ಹೇಮಾವತಿ: ಶಾಸಕರ ಜಟಾಪಟಿ

Published:
Updated:

ಬೆಳಗಾವಿ: ಹೇಮಾವತಿ ನದಿ ನೀರಿಗಾಗಿ ಹಾಸನ ಹಾಗೂ ತುಮಕೂರು ಭಾಗದ ಶಾಸಕರ ನಡುವೆ ವಿಧಾನಸಭೆ
ಯಲ್ಲಿ ಗುರುವಾರ ವಾಕ್ಸಮರ ನಡೆಯಿತು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ, ’ಹೇಮಾವತಿ ಇವರಪ್ಪನ ಮನೆ ಆಸ್ತಿಯಾ‘ ಎಂದು ಪ್ರಶ್ನಿಸಿದರು. 

‘ಹೇಮಾವತಿಯಿಂದ 4 ಟಿಎಂಸಿ ಅಡಿ ನೀರನ್ನು ಕುಡಿಯುವ ಉದ್ದೇಶಕ್ಕಾಗಿ ತುಮಕೂರಿಗೆ ಬಿಡಲಾಗುತ್ತಿತ್ತು. ಆದರೆ, 15 ದಿನಗಳಿಂದ ಏಕಾಏಕಿ ಸ್ಥಗಿತಗೊಳಿಸಲಾಗಿದೆ. ಈ ಹಾಸನದವರ ಜತೆ ಬದುಕಲು ಸಾಧ್ಯವಿಲ್ಲ. ನೀರಾವರಿ ಬಳಕೆದಾರರ ಸಮಿತಿ ಸಭೆಯಲ್ಲೂ ನಮ್ಮ ಜಿಲ್ಲೆಗೆ ನ್ಯಾಯ ದೊರಕಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಬಿಜೆಪಿ ಸದಸ್ಯರಾದ ನಾಗೇಶ್, ಜ್ಯೋತಿ ಗಣೇಶ್ ಧ್ವನಿಗೂಡಿಸಿದರು. ಮಧ್ಯಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಮಸ್ಯೆ ಬಗೆಹರಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಮನವಿ ಮಾಡಿದರು. ಉಭಯ ಜಿಲ್ಲೆಯ ಶಾಸಕರ ಸಭೆ ಕರೆದು ಸಮಸ್ಯೆ ಇತ್ಯರ್ಥಗೊಳಿಸುವುದಾಗಿ ಶಿವಕುಮಾರ್ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !