ಗುರುವಾರ , ಅಕ್ಟೋಬರ್ 17, 2019
21 °C
ಹೆಚ್ಚಿನ ತನಿಖೆ ಅಗತ್ಯ ಇದೆ: ಡಿಸಿ

ಹೇಮಾವತಿ ಸಂತ್ರಸ್ತರ ಹೆಸರಿನಲ್ಲಿ ಭೂ ಕಬಳಿಕೆ: ಸರ್ಕಾರಕ್ಕೆ ತನಿಖಾ ವರದಿ

Published:
Updated:
 ಮೈದುಂಬಿ ಹರಿಯುತ್ತಿರುವ ಹೇಮಾವತಿ

ಹಾಸನ: ಹೇಮಾವತಿ ಜಲಾಶಯ ಯೋಜನೆಯ, ಮುಳುಗಡೆ ಸಂತ್ರಸ್ತರ ಹೆಸರಿನಲ್ಲಿ ಸರ್ಕಾರಿ ಭೂಮಿ ಕಬಳಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ತನಿಖಾ ಸಮಿತಿ ನೀಡಿರುವ ವರದಿಯನ್ನು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಗುರುವಾರ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಹೇಳಿದರು.

ಇಡೀ ಪ್ರಕರಣದ ಸಮಗ್ರ ತನಿಖೆಗಾಗಿ ನೇಮಿಸಿದ್ದ ಹಾಸನ ಮತ್ತು ಸಕಲೇಶಪುರದ ಉಪವಿಭಾಗಾಧಿಕಾರಿಗಳಾದ ಎಚ್‌.ಎಲ್‌.ನಾಗರಾಜ್‌, ಕವಿತಾ ರಾಜಾರಾಂ, ಹೇಮಾವತಿ ಜಲಾಶಯ ಯೋಜನೆ ಭೂ ಸ್ವಾಧೀನಾಧಿಕಾರಿ ಶ್ರೀನಿವಾಸ ಗೌಡ, ಎತ್ತಿನಹೊಳೆ ಯೋಜನೆ ವಿಶೇಷ  ಭೂ ಸ್ವಾಧೀನಾಧಿಕಾರಿ ಗಿರೀಶ್‌ ನಂದನ್‌ ಅವರನ್ನು ಒಳಗೊಂಡ ತಂಡ, ಮಂಜೂರು ಮಾಡಿರುವ ಭೂ ದಾಖಲೆಗಳನ್ನು ಪರಿಶೀಲಿಸಿದೆ.

ಅಧಿಕಾರಿಗಳು ಹಾಗೂ ನೌಕರರ ವಿಚಾರಣೆ ನಡೆಸಿ, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿವರವನ್ನು ವರದಿಯಲ್ಲಿ ನಮೂದಿಸಿದೆ. ‘ಈ ಸಂಬಂಧ ಹೆಚ್ಚಿನ ತನಿಖೆ ನಡೆಸಲು ಕಂದಾಯ ಇಲಾಖೆ ಪ್ರಧಾನ ಕಾಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದರು.

ಹೇಮಾವತಿ ಜಲಾಶಯ ಯೋಜನೆಗಾಗಿ ಭೂಮಿ ಕಳೆದುಕೊಂಡವರ ಹೆಸರಿನಲ್ಲಿದ್ದ ‘ಮುಳುಗಡೆ ಸಂತ್ರಸ್ತರ ಪ್ರಮಾಣಪತ್ರ’ವನ್ನು ಬಳಸಿ, ಉಳ್ಳವರು ಭೂಮಿ ಕಬಳಿಸಿರುವ ಬಗ್ಗೆ ‘ಪ್ರಜಾವಾಣಿ’  ವರದಿ ಪ್ರಕಟಿಸಿತ್ತು.

Post Comments (+)