ಪೊಲೀಸರು ತಮ್ಮಷ್ಟಕ್ಕೆ ತಾವೇ ಕಾನೂನು ಎಂದುಕೊಂಡಿದ್ದಾರೆ: ಹೈಕೋರ್ಟ್‌ ಕಿಡಿ

6

ಪೊಲೀಸರು ತಮ್ಮಷ್ಟಕ್ಕೆ ತಾವೇ ಕಾನೂನು ಎಂದುಕೊಂಡಿದ್ದಾರೆ: ಹೈಕೋರ್ಟ್‌ ಕಿಡಿ

Published:
Updated:

ಬೆಂಗಳೂರು: ‘ಕರ್ನಾಟಕ ರಾಜ್ಯ ಜಂಗಲ್ ರಾಜ್ಯವಾಗಿ ಪರಿವರ್ತನೆಯಾಗಿದೆ. ಪೊಲೀಸರು ತಮ್ಮಷ್ಟಕ್ಕೆ ತಾವೇ ಕಾನೂನು ಎಂದುಕೊಂಡಿದ್ದಾರೆ’ ಎಂದು ಹೈಕೋರ್ಟ್ ಕಿಡಿಕಾರಿದೆ.

ಉದ್ಯಮಿಯೊಬ್ಬರ ವಿರುದ್ಧದ ಸಿವಿಲ್ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಬಸವನಗುಡಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅವರು, ದಕ್ಷಿಣ ಡಿಸಿಪಿ ಆದೇಶದ ಅನುಸಾರ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿದ ಪ್ರಕರಣವನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿಗಳು, ಪೊಲೀಸರ ಕಾರ್ಯ ವೈಖರಿಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

‘ಈ ಪ್ರಕರಣದಲ್ಲಿ ಪೊಲೀಸರು ಮರ್ಯಾದೆಯಿಂದ ಬದುಕುತ್ತಿರುವ ಸಾರ್ವಜನಿಕರನ್ನು ಠಾಣೆಗೆ ಕರೆಯಿಸಿ ಮಾನ ತೆಗೆದಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಕೋರ್ಟ್ ಎಂದಿಗೂ ಇಂತಹ ನಡವಳಿಕೆಯನ್ನು ಸಹಿಸುವುದಿಲ್ಲ’ ಎಂದರು.

‘ಪೋಲಿಸರು ನಿಜವಾದ ಅಪರಾಧ ಕೃತ್ಯ ನಡೆದಿದೆಯೊ ಇಲ್ಲವೊ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಅದು ಬಿಟ್ಟು ಸುಖಾಸುಮ್ಮನೆ ಸಾರ್ವಜನಿಕರನ್ನು ಠಾಣೆಗೆ ಕರೆಸಿ ಟೀಕೆ ಮಾಡುವುದು ತರವಲ್ಲ. ಪೊಲೀಸರ ಈ ಪ್ರವೃತ್ತಿ ಕೊನೆಯಾಗಬೇಕು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 51

    Happy
  • 1

    Amused
  • 0

    Sad
  • 0

    Frustrated
  • 3

    Angry

Comments:

0 comments

Write the first review for this !