ತಿರುಚಿದ ದಾಖಲೆ: ದಂಡ

7

ತಿರುಚಿದ ದಾಖಲೆ: ದಂಡ

Published:
Updated:

ಬೆಂಗಳೂರು: ಕಲ್ಲು ಗಣಿ ಗುತ್ತಿಗೆ ಕೋರಿದ ಪ್ರಕರಣದಲ್ಲಿ ದಾಖಲೆಗಳನ್ನು ತಿರುಚಿದ ಹಾಗೂ ನಕಲು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾವೇರಿಯ ಎರಡು ಸ್ಟೋನ್ ಕ್ರಷರ್‌ ಮಾಲೀಕರಿಗೆ ಹೈಕೋರ್ಟ್‌ ತಲಾ ₹ 1 ಲಕ್ಷ ದಂಡ ವಿಧಿಸಿದೆ.

ಹಾವೇರಿಯ ಅಂಬಾಭವಾನಿ ಸ್ಟೋನ್ ಕ್ರಷರ್ಸ್‌ನ ಅಶೋಕ್ ಟಿ.ಧುಮಾಲ್ ಹಾಗೂ ಚನ್ನಬಸವೇಶ್ವರ ಸ್ಟೋನ್ಸ್ ಕ್ರಷರ್ಸ್‌ ಮಾಲೀಕರಾದ ರತ್ನವ್ವ ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಶನಿವಾರ ವಿಚಾರಣೆ ನಡೆಸಿ, ದಾಖಲೆ ತಿರುಚಿದ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ವಿಚಾರಣೆ ವೇಳೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಪರ ವಕೀಲ ಗುರುರಾಜ ಜೋಷಿ, ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕೋರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !