ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: 27 ಅಧಿಕಾರಿಗಳಿಗೆ ನೇಮಕ ಆದೇಶ

Last Updated 4 ಏಪ್ರಿಲ್ 2019, 19:04 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋರ್ಟ್‌ ತೀರ್ಪಿನ ಅನುಸಾರ 1998ರ ಸಾಲಿನ ಕೆಪಿಎಸ್‌ಸಿ ನೇಮಕಾತಿಗೆ ಸಂಬಂಧಿಸಿದಂತೆ, ಪರಿಷ್ಕೃತ ಪಟ್ಟಿಯ ಅಡಿಯಲ್ಲಿ 27 ಅರ್ಹರಿಗೆ ನೇಮಕಾತಿ ಪತ್ರ ನೀಡಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ಈ ಕುರಿತಂತೆ ಎಸ್. ಶ್ರೀನಿವಾಸ್ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ದಿನೇಶ್ ರಾವ್ ಆದೇಶ ನೀಡಿರುವುದನ್ನು ನ್ಯಾಯಪೀಠಕ್ಕೆ ತಿಳಿಸಿದರು.

ಇದೇ ವೇಳೆ ನ್ಯಾಯಪೀಠವು, ‘ಕೆಪಿಎಸ್‌ಸಿ ಇದೇ ಜನವರಿ 26ರಂದು ಗೆಜೆಟ್‌ನಲ್ಲಿ ಪ್ರಕಟಿಸಿರುವ ಪಟ್ಟಿಯಂತೆ ಎಲ್ಲ 140 ಅಧಿಕಾರಿಗಳ ಸ್ಥಾನಪಲ್ಲಟಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶ ಜಾರಿಗೊಳಿಸಬೇಕು. ಈ ವಿಚಾರದಲ್ಲಿ ವಿಳಂಬ ಸಲ್ಲದು’ ಎಂದು ಖಡಕ್‌ ತಾಕಿತು ಮಾಡಿದೆ.

‘ಈ ಪ್ರಕ್ರಿಯೆಗೆ ಕಾಲಾವಕಾಶ ನೀಡಬೇಕು’ ಎಂಬ ದಿನೇಶ್‌ ರಾವ್‌ ಅವರ ಕೋರಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ ನ್ಯಾಯಪೀಠ, ‘ಇದೇ 15ರೊಳಗೆ ಈ ಪ್ರಕ್ರಿಯೆ ಪೂರೈಸಿ ಕೋರ್ಟ್‌ಗೆ ವರದಿ ಸಲ್ಲಿಸಿ’ ಎಂದೂ ಸೂಚಿಸಿದೆ.

ಆಕ್ಷೇಪ: ‘ಸಹಕಾರ ಇಲಾಖೆ ನೀಡಿರುವ ನೇಮಕ ಆದೇಶದಲ್ಲಿ ತಾತ್ಕಾಲಿಕ ಎಂದು ಉಲ್ಲೇಖಿಸಲಾಗಿದೆ’ ಎಂಬ ಅರ್ಜಿದಾರರ ಪರ ವಕೀಲರ ಆಕ್ಷೇಪವನ್ನು ಪರಿಗಣಿಸಿದ ನ್ಯಾಯಪೀಠ ‘ಈ ಪದವನ್ನು ತೆಗೆದುಹಾಕಿ ಪರಿಷ್ಕೃತ ನೇಮಕಾತಿಯ ಆದೇಶ ನೀಡಿ’ ಎಂದು ದಿನೇಶ್‌ ರಾವ್‌ ಅವರಿಗೆ ನಿರ್ದೇಶಿಸಿದೆ. ಇದೇ 15ಕ್ಕೆ ವಿಚಾರಣೆ ಮುಂದೂಡಲಾಗಿದೆ.

ಏನಿದು ಅರ್ಜಿ?: ‘ಅನರ್ಹ ಅಭ್ಯರ್ಥಿಗಳನ್ನು ಕೈಬಿಟ್ಟು ಅರ್ಹ ಅಭ್ಯರ್ಥಿಗಳ ನೇಮಕ ಮಾಡಿ ಎಂದು ಹೈಕೋರ್ಟ್ 2016ರ ಜೂನ್‌ 21ರಂದು ಆದೇಶಿಸಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್ ಕೂಡಾ ಎತ್ತಿ ಹಿಡಿದಿತ್ತು. ಆದರೂ, ಸರ್ಕಾರ ಕೋರ್ಟ್ ತೀರ್ಪು ಪಾಲಿಸಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.

ಆದೇಶ ಪಡೆದವರು
* ಆರ್ಥಿಕ ಇಲಾಖೆ

1. ಸೇಸುನಾಥನ್
2. ಪಾಂಡುರಂಗಯ್ಯ ಸಿ.ಪಿ.
3. ವನಮಾಲಾ ಕೆ.(ಎಲ್ಲರೂ ಸಹಾಯಕ ಖಜಾನೆ ಅಧಿಕಾರಿ)

* ಕಂದಾಯ ಇಲಾಖೆ
4. ಪಾಟೀಲ ಶಿವನಗೌಡ ನಾಗನಗೌಡ(ಸಹಾಯಕ ನಿರ್ದೇಶಕ ಭೂಮಾಪನ)
5. ಭಾಸ್ಕರ ನಾಯ್ಕ
6. ಮಹೇಶ ಕೆ. (ಇಬ್ಬರೂ ಸಹಾಯಕ ನಿರ್ದೇಶಕ ಯೂಥ್‌ ಸರ್ವೀಸ್‌)

ಸಹಕಾರ ಇಲಾಖೆ
7. ಶಂಕರ
8. ಅಶ್ವಿನಿ ವೈ.ಟಿ
9. ಮಂಜುನಾಥ ವೈ.
10. ನಿವೇದಿತಾ ಟಿ.ಎಂ (ಎಲ್ಲರೂ ಸಹಾಯಕ ರಿಜಿಸ್ಟ್ರಾರ್‌)

ಕೋ–ಆಪರೇಟಿವ್‌ ಅಡಿಟ್‌
11. ಮೊಹಮ್ಮದ್‌ ಯೂಸುಫ್‌
12. ವೇಣು ಡಿ.ವಿ
13. ಗಿರೀಶ ಓ
14. ಶಂಕರೇಗೌಡ
15. ಮಲ್ಲಿಕಾರ್ಜುನ ಬಿರಾದಾರ
16. ತಾರನಾಥ
17. ಮಹದೇವಪ್ಪ ಆರ್‌
18. ವಿದ್ಯಾ ಹೊನಶೆಟ್ಟಿ
19. ಶಂಸುನ್ನಿಸಾ ಸಿ.ಬಿ.
20. ಹೀರಾವತಿ
21. ಶಶಿರೇಖಾ ಎಸ್‌.ಎಂ.( ಎಲ್ಲರೂ ಅಸಿಸ್ಟೆಂಟ್ ಚೀಫ್‌ ಆಡಿಟ್‌)

ಕೃಷಿ ಇಲಾಖೆ
22. ರವಿಚಂದ್ರ ಎಂ
23. ಸಂಗೀತಾ ಎಸ್‌ ( ಇಬ್ಬರೂ ಜಿಲ್ಲಾ ಮಾರುಕಟ್ಟೆ ಅಧಿಕಾರಿ),

ನಗರಾಭಿವೃದ್ಧಿ
24. ಎಸ್‌. ಶ್ರೀನಿವಾಸ (ಮುಖ್ಯಾಧಿಕಾರಿ)‌

ಅಬಕಾರಿ ಇಲಾಖೆ
25. ಅಜ್ಮತ್‌ ಉಲ್ಲಾ ಖಾನ್‌ (ಡಿವೈಎಸ್‌ಪಿ)

ಕಾರ್ಮಿಕ ಇಲಾಖೆ
26. ಮೊಹ್ಮದ್‌ ಅಕ್ಬರ್‌
27. ಪರಶುರಾಮ್ ಎಸ್‌. ವಾಲೀಕಾರ (ಉದ್ಯೋಗಾಧಿಕಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT