ಪೊಲೀಸ್‌ ಅಧಿಕಾರಿಗಳ ಜೇಷ್ಟತಾ ಪಟ್ಟಿ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ

7

ಪೊಲೀಸ್‌ ಅಧಿಕಾರಿಗಳ ಜೇಷ್ಟತಾ ಪಟ್ಟಿ: ಯಥಾಸ್ಥಿತಿ ಕಾಯ್ದುಕೊಳ್ಳಲು ಹೈಕೋರ್ಟ್ ಆದೇಶ

Published:
Updated:

ಬೆಂಗಳೂರು: ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿ ಜ್ಯೇಷ್ಠತಾ ಪಟ್ಟಿಯನ್ನು ಮಾರ್ಪಾಡು ಮಾಡಿ ಬಿಡುಗಡೆ ಮಾಡಿದ್ದ ತಾತ್ಕಾಲಿಕ ಪಟ್ಟಿಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.

ನಗರದ ಪೊಲೀಸ್‌ ಇನ್‌ಸ್ಪೆಕ್ಟರ್‌ ಎಲ್‌.ವೈ.ರಾಜೇಶ್‌ ಸೇರಿದಂತೆ ಮೂವರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಹಾಗೂ ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಪಿ.ಎಸ್.ರಾಜಗೋಪಾಲ್ ವಾದ ಮಂಡಿಸಿ, ‘ಜ್ಯೇಷ್ಠತಾ ಪಟ್ಟಿ ಮಾರ್ಪಾಡು ಮಾಡಿರುವ ಪರಿಣಾಮ ಗ್ರಾಮೀಣ ಕೃಪಾಂಕ ರಹಿತವಾಗಿ ನೇಮಕವಾದ ಅಧಿಕಾರಿಗಳ ಬಡ್ತಿಗೆ ಹಿನ್ನಡೆಯಾಗಿದೆ’ ಎಂದರು.

‘ಈಗಾಗಲೇ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಈ ಪ್ರಕರಣದಲ್ಲಿ ಮಧ್ಯಂತರ ತಡೆ ನೀಡಿತ್ತು’ ಎಂಬ ಅಂಶವನ್ನೂ ನ್ಯಾಯಪೀಠದ ಗಮನಕ್ಕೆ ತಂದರು.

ಇದಕ್ಕೆ ಪ್ರತಿಯಾಗಿ ರಾಜ್ಯ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಎ.ಎಸ್‌.ಪೊನ್ನಣ್ಣ, ‘2002ರಲ್ಲಿ ನೇಮಕ ಹೊಂದಿದವರ ಬಡ್ತಿಗೆ ನಿಯಮಗಳು ಪೂರ್ವಾನ್ವಯ ಅಗುವುದಿಲ್ಲ’ ಎಂದರು.

ವಿಚಾರಣೆಯನ್ನು ಅಕ್ಟೋಬರ್ 3ಕ್ಕೆ ಮುಂದೂಡಲಾಗಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !