ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಿಂದ 8ನೇ ತರಗತಿಗೆ ಜುಲೈ 1ರಿಂದ ಪಾಠ ಇಲ್ಲ!

Last Updated 27 ಜೂನ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿಗೆ ಬೋಧಿಸುವ ಪದವೀಧರ ಶಿಕ್ಷಕರನ್ನು ಹೊರತುಪಡಿಸಿ ಉಳಿದ ಶಿಕ್ಷಕರನ್ನು 1ರಿಂದ 5ನೇ ತರಗತಿವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರೆಂದು ಪರಿಗಣಿಸಲು ಸರ್ಕಾರ ನಿರ್ಧರಿಸಿರುವುದರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲು ಶಿಕ್ಷಕರು ನಿರ್ಧರಿಸಿದ್ದಾರೆ.

ಜೂನ್‌ 29ರಂದು ತರಗತಿ ಮುಗಿದ ನಂತರ ರಾಜ್ಯದ ಎಲ್ಲಜಿಲ್ಲಾಧಿಕಾರಿ ಕಚೇರಿಗಳ ಬಳಿ ಮೌನ ಪ್ರತಿಭಟನೆ ನಡೆಸಲಾಗುವುದು. ಸರ್ಕಾರದ ನಿರ್ಧಾರ ಬದಲಾಗದಿದ್ದಲ್ಲಿ ಜುಲೈ 1ರಿಂದ 6ರಿಂದ 8ನೇ ತರಗತಿಗೆ ಪಾಠ ಮಾಡುವುದಿಲ್ಲ ಎಂದು ಶಿಕ್ಷಕರು ಎಚ್ಚರಿಸಿದ್ದಾರೆ.

‘ನಮ್ಮಲ್ಲಿ 90 ಸಾವಿರದಷ್ಟು ಮಂದಿ ಪದವೀಧರ ಶಿಕ್ಷಕರೇ ಇದ್ದಾರೆ.ಹೆಚ್ಚಿನವರು ಸಂಬಳವನ್ನೂ ಬಿಟ್ಟುಕೊಟ್ಟು ಪದವಿ/ ಸ್ನಾತಕೋತ್ತರ ಪದವಿ, ಪಿಎಚ್‌ಡಿ ಗಳಿಸಿದ್ದಾರೆ.ಪದವೀಧರ ಶಿಕ್ಷಕರನ್ನಾಗಿ ನೇಮಕ ಮಾಡುವುದಿದ್ದರೆ ಮೊದಲಿಗೆ ನಮಗೆ ಅವಕಾಶ ಕೊಡಿ, ಹೆಚ್ಚುವರಿ ಹುದ್ದೆ ಉಳಿದರಷ್ಟೇ ಇತರರಿಗೆ ಅವಕಾಶ ಕಲ್ಪಿಸಿ ಎಂದು ಸರ್ಕಾರವನ್ನು ಪದೇ ಪದೇ ಕೇಳುತ್ತಲೇ ಇದ್ದೇವೆ. ಸರ್ಕಾರ ಈ ಮನವಿಗೆ ಸೊಪ್ಪು ಹಾಕದಿದ್ದರೆ ನಮ್ಮ ಹೋರಾಟ ತೀವ್ರಗೊಳಿಸುವುದು ನಿಶ್ಚಿತ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿ ಹೇಮಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT