ಮಂಗಳವಾರ, ಜನವರಿ 28, 2020
29 °C

ಮಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ದೇಶದಲ್ಲೇ ದಿನದ ಗರಿಷ್ಠ ತಾಪಮಾನವು ಮಂಗಳವಾರ ನಗರದಲ್ಲಿ 37.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕಳೆದ ಕೆಲವು ದಿನಗಳಿಂದ ಕರಾವಳಿಯಲ್ಲಿ ದೇಶದ ಇತರೆಡೆಗಿಂತ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಸೋಮವಾರ ನಗರದ ಬಜ್ಪೆಯಲ್ಲಿ ದಾಖಲಾದ 34.8 ಡಿ.ಸೆ.ದೇಶದಲ್ಲೇ ದಿನದ ಗರಿಷ್ಠ ತಾಪಮಾನವಾಗಿತ್ತು.

ಉತ್ತರ ಭಾರತದ ರಾಜಸ್ತಾನ ಮತ್ತಿತರೆಡೆಗಳಲ್ಲಿ ಚಳಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಲ್ಲಲ್ಲಿ ಮಂಜು ಕವಿಯುತ್ತಿದೆ. ತಮಿಳುನಾಡು ತೀರದ ಅಲ್ಲಲ್ಲಿ ಮೋಡ ಕವಿದು, ತುಂತುರು ಮಳೆಯಾಗುತ್ತಿದೆ. ಆದರೆ, ಮಂಗಳೂರಿನ ತಾಪಮಾನವು ದೇಶದಲ್ಲೇ ಗರಿಷ್ಠವಾಗಿದೆ.

ಮಂಗಳವಾರ ದೇಶದಲ್ಲೇ ದಿನದ ಕನಿಷ್ಠ ತಾಪಮಾನವು ಹರಿಯಾಣದ ನರ್ನೌಲ್‌ನಲ್ಲಿ 2.5 ಡಿಗ್ರಿ ಸೆಲ್ಸಿಯಸ್‌ ದಾಖಲಾದರೆ, ಮಂಗಳೂರಿನಲ್ಲಿ ಕನಿಷ್ಠ ತಾಪಮಾನ 22.2 ಡಿಗ್ರಿ ಸೆಲ್ಸಿಯಸ್ ಇತ್ತು ಎಂದು ಭಾರತೀಯ ಹವಾಮಾನ ಇಲಾಖಾ ವರದಿ ತಿಳಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು