ವಿದ್ಯಾರ್ಥಿನಿಯರಿಗೆ ಪ್ರೀತಿ ಪಾಠ ಹೇಳಿದ ಶಿಕ್ಷಣ ಸಚಿವ

7

ವಿದ್ಯಾರ್ಥಿನಿಯರಿಗೆ ಪ್ರೀತಿ ಪಾಠ ಹೇಳಿದ ಶಿಕ್ಷಣ ಸಚಿವ

Published:
Updated:
Deccan Herald

ಮೈಸೂರು: ‘ಲವ್‌ ಮಾಡಿ, ಡಿವೋರ್ಸ್ ಮಾಡಿಕೊಳ್ಳುತ್ತೀರಿ. ನಂತರ ಡೆಡ್‌ ಬಾಡಿ ಆಗ್ತೀರಿ. ಅದರ ಬದಲು ಉತ್ತಮ ಶಿಕ್ಷಣ ಪಡೆದು ಪೋಷಕರನ್ನು ಸಲಹಿ...’ –ಹೀಗೆ, ನಗರದ ಮಹಿಳಾ ಕಾಲೇಜೊಂದರಲ್ಲಿ ಶನಿವಾರ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ವಿದ್ಯಾರ್ಥಿನಿಯರಿಗೆ ಪ್ರೀತಿ–ಪ್ರೇಮದ ಪಾಠ ಮಾಡಿದರು.

ಹೆಣ್ಣು ಮಕ್ಕಳು ಕಾಲೇಜಿನಲ್ಲಿ ಓದುವಾಗ ಎಚ್ಚರಿಕೆಯಿಂದ ಇರಬೇಕು. ಹುಡುಗರು ಪ್ರೀತಿ– ಪ್ರೇಮ ಎಂದು ಸೆಳೆಯುತ್ತಾರೆ. ಅವರೊಂದಿಗೆ ಸೇರಿ ತಪ್ಪು ಮಾಡಬಾರದು. ಬದಲಿಗೆ ಬುದ್ಧಿವಾದ ಹೇಳಿ ಸರಿದಾರಿಗೆ ತರಬೇಕು. ಪ್ರೇಮಕ್ಕಿಂತ ಸ್ನೇಹ ದೊಡ್ಡದು ಎಂದು ಕಿವಿಮಾತು ಹೇಳಿದರು.

‘ಪ್ರೀತಿಸುತ್ತೀರಿ, ಬಂಧು ಬಳಗ, ಪೋಷಕರ ವಿರೋಧ ಕಟ್ಟಿಕೊಂಡು ಮದುವೆಯಾಗುತ್ತೀರಿ. ನಾಲ್ಕು ದಿನಗಳಲ್ಲಿ ಡಿವೋರ್ಸ್‌ ಪಡೆಯುತ್ತೀರಿ. ಇವೆಲ್ಲಾ ಏಕೆ ಬೇಕು? ಇದರ ಬದಲು ಓದಿನ ಕಡೆ ಗಮನಕೊಟ್ಟು ಭವಿಷ್ಯ ಕಟ್ಟಿಕೊಳ್ಳಿ’ ಎಂದು ಸಲಹೆ ನೀಡಿದರು.

ಮೇಕಪ್‌ ಏಕೆ?: ‘ಮೇಕಪ್‌ ಮಾಡಿಕೊಳ್ಳುವ ಅಗತ್ಯವಿಲ್ಲ. ಸಹಜವಾದ ಸೌಂದರ್ಯವೇ ಶ್ರೇಷ್ಠವಾದುದು. ಮೇಕಪ್‌ ಮಾಡಿಕೊಂಡು ತ್ವಚೆ ಹಾಳು ಮಾಡಿಕೊಳ್ಳಬೇಡಿ’ ಎಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರೂ ವಿದ್ಯಾರ್ಥಿನಿಯರಿಗೆ ನೀತಿಪಾಠ ಮಾಡಿದರು.

ಕಾಡಾನೆ ದಾಳಿ: ಮಹಿಳೆಗೆ ಗಾಯ

ಮಡಿಕೇರಿ: ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯಲ್ಲಿ ಶನಿವಾರ ನಡೆದಿದೆ.   

ರಾಧಾ (55) ಗಾಯಗೊಂಡ ಮಹಿಳೆ. ಕೊಡಗರಳ್ಳಿಯ ಐಬಿಸಿ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಒಂಟಿ ಸಲಗವೊಂದು ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ಬರುತ್ತಿರುವುದನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸುವಷ್ಟರಲ್ಲಿ ಸೊಂಡಿಲಿನಿಂದ ಎತ್ತಿ ಎಸೆದಿದೆ. ಉಳಿದ ಕಾರ್ಮಿಕರು ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಕೈ, ಕಾಲು ಹಾಗೂ ಸೊಂಟದ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿರುವ ಮಹಿಳೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !