ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಚಿಟ್ಟೆಗಳನ್ನು ನೋಡಲು ಬನ್ನಿ

Last Updated 6 ಮೇ 2018, 19:30 IST
ಅಕ್ಷರ ಗಾತ್ರ

ಚಿಕ್ಕವರಿದ್ದಾಗ ಬೇಸಿಗೆ ರಜೆ ಬಂದ್ರೆ ಸಾಕು, ಕೈಯಲ್ಲಿ ಪತೇರಿಯಂ ಗಿಡ ಹಿಡಿದು, ಹಾದಿ ಬೀದಿ ಸುತ್ತಿ ಹಳದಿ ಚಿಟ್ಟೆ, ಏರೋಪ್ಲೇನ್ ಚಿಟ್ಟೆ ಅಂತ ಹಿಡಿದು ಅದನ್ನು ಪ್ಲಾಸ್ಟಿಕ್ ಕವರ್‍ನಲ್ಲೋ, ಗಾಜಿನ ಡಬ್ಬದಲ್ಲೋ ಹಾಕಿ ಸಂಭ್ರಮಿಸುತ್ತಿದ್ದ ಬಾಲ್ಯ ಎಷ್ಟು ಜನಕ್ಕಿದೆಯೋ ಗೊತ್ತಿಲ್ಲ. ಈಗಿನ ಮಕ್ಕಳಿಗೆ ಚಿಟ್ಟೆಯನ್ನು ಗ್ರಾಫಿಕ್ ಡಿಸೈನಿಂಗ್ ಅಲ್ಲಿ ನೋಡುವಂತಾಗಿದೆ. ಚಿಟ್ಟೆ ಮುಟ್ಟಿ ಅದರ ಬಣ್ಣವನ್ನು ಮುಖಕ್ಕೆ ಅಂಟಿಸಿಕೊಂಡು ಕಪಿ ಚೇಷ್ಟೆ ಮಾಡುವುದರ ಅನುಭವ ಅನಾತಿ ದೂರದಲ್ಲಿಯೇ ಉಳಿದು ಹೋಯ್ತು !

ಬನ್ನೇರುಘಟ್ಟದ ಚಿಟ್ಟೆ ಪಾರ್ಕ್‌ನಲ್ಲಿ ಸ್ವಚ್ಛಂದವಾಗಿ ಚಿಟ್ಟೆಗಳು ಹಾರಾಡುವುದನ್ನು ಮತ್ತು ಚಿಟ್ಟೆಗಳ ಜೀವಿತಾವಧಿ, ಅವುಗಳು ಬೆಳೆಯಯುವ ಬಗೆ, ವಾತಾವರಣ ಹೀಗೆ ಹಲವು ವಿಶೇಷಗಳನ್ನು ತಿಳಿದುಕೊಳ್ಳುವದರ ಜೊತೆಗೆ ರಾಜ್ಯ ಮತ್ತು ರಾಷ್ಟ್ರೀಯ ಚಿಟ್ಟೆಗಳ ಸಂರಕ್ಷಣಾ ತಾಣವಾಗಿದೆ.

2006 ರಲ್ಲಿ ಪ್ರಾರಂಭವಾದ ಚಿಟ್ಟೆ ಪಾರ್ಕ್‌ನಲ್ಲಿ ಪ್ರತಿ ದಿನ 2 ಸಾವಿರಕ್ಕೂ ಹೆಚ್ಚು ಮಂದಿ ಚಿಟ್ಟೆಗಳನ್ನು ನೋಡಲು ಬರುತ್ತಾರೆ. ಸರಿ ಸುಮಾರು 146 ಬಗೆಯ ಚಿಟ್ಟೆಗಳನ್ನು ಬನ್ನೇರುಘಟ್ಟದ ಸುತ್ತ ಮುತ್ತಲಿಂದ ಗುರುತಿಸಿ ಇಲ್ಲಿ ಬಿಡಲಾಗಿದ್ದು, 15 ಜಾತಿಯ ಚಿಟ್ಟೆಗಳ ಸಂತಾನೋತ್ಪತ್ತಿಗೆ ವಿಶೇಷ ಸೆಲ್ (ಪ್ರತ್ಯೇಕ ಸ್ಥಳ)ಗಳನ್ನು ನಿರ್ಮಿಸಲಾಗಿದೆ. ಚಿಟ್ಟೆಗಳು ಸಹಜವಾಗಿ ಆರ್ಕಷಿತವಾಗುವ ಹಳದಿ, ನೀಲಿ, ಮತ್ತು ಕೆಂಪು ಬಣ್ಣದ ಸಸ್ಯಗಳಿಗೆ ಹೆಚ್ಚು ಆರ್ಕಷಿತವವಾಗುತ್ತದೆ. ಅಂತ ಸಸಿಗಳನ್ನು ಹೆಚ್ಚು ಬೆಳಸಲಾಗಿದೆ. ಚಿಟ್ಟೆಗಳು ಈ ಸಸಿಗಳಲ್ಲಿ ಮೊಟ್ಟೆಗಳನ್ನು ಇಡುತ್ತಿದಂತೆ ಅದರ ಲಾರ್ವಗಳನ್ನು ಸಂರಕ್ಷಿಸಿ ಪ್ರತ್ಯೇಕ ಸ್ಥಳದಲ್ಲಿ ಇಡಲಾಗುತ್ತದೆ.

ಜೇಡ, ಅಳಿಲು ಮತ್ತಿತರವು ಚಿಟ್ಟೆ ಮರಿಗಳನ್ನು ತಿನ್ನುವ ಅಪಾಯ ಇರುವುದರಿಂದ ಅದನ್ನು ತಪ್ಪಿಸಲು ಮತ್ತು ಚಿಟ್ಟೆಯ ಮರಿಗಳು ಪೂರ್ತಿ ಗಿಡವನ್ನು ತಿನ್ನುವ ಅಪಾಯ ಇರುವುದರಿಂದ ಹೀಗೆ ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಕೀಟ ತಜ್ಞರಾದ ಲೋಕನಾಥ್. ಹೀಗೆ ಸಂರಕ್ಷಿಸಿದ ಲಾರ್ವಗಳನ್ನು ಲ್ಯಾಬ್‌ನಂತಿರುವ ಪ್ರತ್ಯೇಕ ಕೋಣೆಯಲ್ಲಿ ಸಂಗ್ರಹಿಸಲಾಗುತ್ತದೆ. ಅಲ್ಲಿಂದ ಇನ್ನೊಂದು ಪ್ರತ್ಯೇಕ ಲ್ಯಾಬ್‍ನಲ್ಲಿ ಗಂಡು ಮತ್ತು ಹೆಣ್ಣು ಚಿಟ್ಟೆಗಳನ್ನು ಬಿಡಲಾಗುತ್ತದೆ. ಅವು ಸಜಾತಿಯ ಚಿಟ್ಟೆಗಳ ವಾಸನೆ ಗ್ರಹಿಸಿ ಅವುಗಳೊಂದಿಗೆ ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ ಎನ್ನುತ್ತಾರೆ ಲೋಕನಾಥ್.

ಎಲ್ಲ ಚಿಟ್ಟೆಗಳು ಎಲ್ಲ ಸಸಿಗಳಲ್ಲೂ ಮೊಟ್ಟೆಗಳನ್ನು ಇಡುವುದಿಲ್ಲ. ಪ್ರತಿ ಚಿಟ್ಟೆಯು ಕೆಲವೊಂದು ಸಸಿಗಳಲ್ಲಿ ಮಾತ್ರ ಮರಿಗಳನ್ನು ಮಾಡುತ್ತವೆ. ಹೀಗಾಗಿ ಆ ಚಿಟ್ಟೆಗಳಿಗೆ ಆಹಾರವನ್ನು ಹಾಕುವಾಗ ಅವು ತಿನ್ನುವುದನ್ನು ಮಾತ್ರ ಹಾಕಲಾಗುತ್ತದೆ. ಒಂದು ಚಿಟ್ಟೆ 200 ರಿಂದ 300 ಮೊಟ್ಟೆಗಳನ್ನು ಹಾಕುತ್ತದೆ. ಆದರೆ, ಹಲವು ಹಂತಗಳನ್ನು ದಾಟಿ ಬರುವ ಚಿಟ್ಟೆಗಳು ಕೊನೆಯದಾಗಿ 20 ರಿಂದ 30 ಮಾತ್ರ ಉಳಿಯುತ್ತವೆ.

ದೇಶದಲ್ಲಿ ಎರಡು ರಾಜ್ಯಗಳು ರಾಜ್ಯದ ಚಿಟ್ಟೆ ಎಂದು ಮಾನ್ಯತೆ ನೀಡಿರುವ ಚಿಟ್ಟೆಗಳು ಇಲ್ಲಿದೆ.

ಚಿಟ್ಟೆಗಳ ಹಲವು ವಿಶೇಷಗಳನ್ನು ತಿಳಿದುಕೊಳ್ಳಬಹುದು. ನಮಗೆಲ್ಲ ಮೂಳೆಗಳು ಮೈ ಒಳಗಿದ್ದರೆ. ಚಿಟ್ಟೆಗಳಿಗೆ ಮೂಳೆ ದೇಹದ ಹೊರಗಿದ್ದು, ಮಾಂಸ ದೇಹದ ಒಳಗಿರುತ್ತದೆ. ಚಿಟ್ಟೆಯ ಜೀವಿತಾವದಿ ಒಂದರಿಂದ ಒಂದೂವರೆ ತಿಂಗಳು ಮೊಟ್ಟೆಯಿಂದ ಚಿಟ್ಟೆಯಾದ ಕೆವಲ 6 ರಿಂದ 15 ದಿನಗಳವರಗೆ ಮಾತ್ರ ಬದುಕಿರುತ್ತದೆ. 4 ರಿಂದ 5 ಬಾರಿ ದೇಹದ ಪೊರೆಯನ್ನು ಬಿಡುತ್ತದೆ. ಇಂಥ ಹಲವು ವಿಚಾರಗಳನ್ನು ಚಿಟ್ಟೆಪಾರ್ಕ್‌ನಲ್ಲಿ ತಿಳಿದುಕೊಳ್ಳಬಹುದು.

ಜೀವ ನಿಮಿತ್ತಂ ಬಹುಕೃತ ವೇಷಂ: ಚಿಟ್ಟೆಗಳ ಜೀವಿತಾವಧಿಯೇ ಅತ್ಯಲ್ಪ. ಆದರಲ್ಲು ಅವುಗಳಿಗೆ ಅಪಾಯ ತಪ್ಪಿದ್ದಲ್ಲ. ತಮ್ಮನ್ನು ಭಕ್ಷಿಸಲು ಹವಣಿಸುವ ಕೀಟ, ಹಲ್ಲಿ ಹಾಗೂ ಹಕ್ಕಿಗಳಿಂದ ರಕ್ಷಿಸಿಕೊಳ್ಳಲು ಹಲವು ಕಸರತ್ತು ಮಾಡುತ್ತದೆ. ಹಾವಿನಂತೆ ಹೆಡೆಯೆತ್ತಿ, ಬುಸುಗುಟ್ಟಿ ಹೆದರಿಸುವಂತೆ ಮಾಡುತ್ತವೆ. ವಿಷಪೂರಿತ ಸಸ್ಯಗಳ ಬಣ್ಣವನ್ನು ಸುತ್ತಿ ಕೊಳ್ಳುತ್ತದೆ. ಕಂಡು ಕಾಣದಂತೆ ಬಚ್ಚಿಟ್ಟು ಕೊಳ್ಳುತ್ತವೆ.

ಚಿಟ್ಟೆಯೇ ಚಿಟ್ಟೆಗೆ ವೈರಿ: ಡ್ರೈಂಡ್ ರಾಮ್ ರೆಂಡ್ ಪರಾವಲಂಬಿ ಜೀವಿ ಚಿಟ್ಟೆ ತನ್ನ ಮರಿಗಳನ್ನು ಬೇರೆಯ ಚಿಟ್ಟೆ ಮೊಟ್ಟೆಯಲ್ಲಿ ತುಂಬುತ್ತದೆ. ಆ ಮರಿಗಳು ಬೇರೆ ಚಿಟ್ಟೆಯ ಮರಿಗಳನ್ನು ತಿಂದು ಬಿಡುತ್ತದೆ ಒಂದು ರೀತಿ ಜಿಂಕೆ ಇದ್ದಲ್ಲಿ ಹುಲಿ ಬರುವಂತೆ. ಈ ಮರಿಗಳನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ಡ್ರೈಂಡ್‌ ರಾಮ್‌ ರೆಂಡ್‌ ಚಿಟ್ಟೆಗಳಿಂದ ಶೇ.30 ರಷ್ಷು ಚಿಟ್ಟೆಗಳು ಮರಣ ಹೊಂದುತ್ತವೆ ಅಥವಾ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ನಮ್ಮ ರಾಜ್ಯದ ಚಿಟ್ಟೆ ಯಾವುದು?: ಬಹಳಷ್ಟು ಮಂದಿಗೆ ನಮ್ಮ ರಾಜ್ಯಕ್ಕೊಂದು ಚಿಟ್ಟೆ ಇದೆ ಎಂದಾಗಲಿ ಅದಕ್ಕೆ ರಾಜ್ಯ ಸರ್ಕಾರ ಮಾನ್ಯತೆಯನ್ನು ನೀಡಿದೆ ಎಂದಾಗಲಿ ತಿಳಿದಿರಲಿಕ್ಕಿಲ್ಲ.

ಹೌದು ನಮ್ಮ ರಾಜ್ಯದ ಚಿಟ್ಟೆ ‘ಸದರ್ನ್‌ ಬಾಡ್ವಿಂಗ್‌’. ಇದು ಕೆಂಪು ಮತ್ತು ಹಳದಿ ಬಣ್ಣದಿಂದ ಕೂಡಿದೆ. ಭಾರತದಲ್ಲಿ ಚಿಟ್ಟೆಯೊಂದನ್ನು ರಾಜ್ಯ ಚಿಟ್ಟೆ ಎಂದು ಪರಿಗಣಿಸಿ ಮಾನ್ಯತೆಯನ್ನು ನೀಡಿರುವುದು ಎರಡೇ ರಾಜ್ಯಗಳಲ್ಲಿ. ಒಂದು ಕರ್ನಾಟಕದ ‘ಸದರ್ನ್‌ ಬಾಡ್ವಿಂಗ್‌’ ಮತ್ತೊಂದು ಮಹಾರಾಷ್ಟ್ರದ ‘ಬ್ಲು ಮರ್ಮನ್’ ಎರಡು ಚಿಟ್ಟೆಗಳನ್ನು ಚಿಟ್ಟೆ ಪಾರ್ಕ್‌ನಲ್ಲಿ ನೋಡಬಹುದಾಗಿದೆ.

**

ಚಿಟ್ಟೆಗಳನ್ನು ಮರಿ ಮಾಡುವುದು ಅತ್ಯಂತ ಸವಾಲಿನ ಕೆಲಸ. ಮರಿಗಳನ್ನು ಜೋಪಾನ ಮಡುವುದರಲ್ಲಿ ಸ್ವಲ್ಪ ಎಡವಟ್ಟಾದರು ಚಿಟ್ಟೆಗಳು ಮರಣ ಹೊಂದುವ ಅಥವಾ ಅಂಗವಿಕಲತೆಗೆ ಒಳಗಾಗುವ ಅಪಾಯ ಇರುತ್ತದೆ.
– ಲೋಕನಾಥ್, ಕೀಟ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT