ಹಿಂದೂವಾದಿಗಳ ಹತ್ಯೆ ಕೋಕಾದಡಿ ಪ್ರಕರಣಕ್ಕೆ ಆಗ್ರಹ

7

ಹಿಂದೂವಾದಿಗಳ ಹತ್ಯೆ ಕೋಕಾದಡಿ ಪ್ರಕರಣಕ್ಕೆ ಆಗ್ರಹ

Published:
Updated:

ಬೆಂಗಳೂರು: ‘ಗೌರಿ ಹತ್ಯೆ ಪ್ರಕರಣದ ನಂತರದ ಅವಧಿಯಲ್ಲಿ ಕೆಲವು ಹಿಂದೂಗಳ ಹತ್ಯೆಯಾಗಿದ್ದು, ಈ ಪ್ರಕರಣಗಳ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು’ ಎಂದು ಹಿಂದೂ ವಿಧಿಜ್ಞ ಪರಿಷತ್‌ ಆಗ್ರಹಿಸಿದೆ.

ಪರಿಷತ್ತಿನ ರಾಷ್ಟ್ರೀಯ ಘಟಕದ ಅಧ್ಯಕ್ಷ ವೀರೇಂದ್ರ ಇಚಲಕರಂಜಿಕರ್‌ ಮಂಗಳವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗೌರಿ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ತುಂಬಾ ವೇಗವಾಗಿ ಎಸ್‌ಐಟಿ ತಂಡವನ್ನು ರಚಿಸಿತು. ಪ್ರಕರಣದ ಆರೋಪಿಗಳ ಮೇಲೆ ನಿರ್ದಯೆಯಿಂದ ಹಲ್ಲೆ ಮಾಡಿ, ಹೇಳಿಕೆ ಪಡೆಯಿತು. ಯಾವುದೇ ಅಪರಾಧಗಳ ಹಿನ್ನೆಲೆ ಇಲ್ಲದಿದ್ದರೂ ಅವರ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಿತು’ ಎಂದು ದೂರಿದರು.

‘ರಾಷ್ಟ್ರೀಯ ಸ್ವಯಂಸೇವಕ ಸಂಘ, ಭಾರತೀಯ ಜನತಾ ಪಕ್ಷ ಹಾಗೂ ಇತರ ಸಂಘಟನೆಗಳ 8 ಹಿಂದೂವಾದಿ ಕಾರ್ಯಕರ್ತರನ್ನು (ತ್ಯಾಗರಾಜ ಪಿಳ್ಳೈ, ಆನಂದ ಪೈ ಸಹಾಯಕ ರಮೇಶ್, ಹರೀಶ್‌, ವಿಘ್ನೇಶ್‌, ಸುಧೀಂದ್ರ, ಕೆ.ರಾಜು ಹಾಗೂ ಇತರರು) ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಮೈಸೂರಿನ ಅಬಿದ್‌ ಪಾಶಾ ಮತ್ತು ಅವರ ತಂಡದ ಕೈವಾಡವಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದರೂ ಹತ್ಯೆಗೈದವರ ವಿರುದ್ಧ ಸರ್ಕಾರ ಕೋಕಾ ಕಾಯ್ದೆಯನ್ನು ಏಕೆ ಜಾರಿಗೊಳಿಸಿಲ್ಲ’ ಎಂದು ಅವರು ಪ್ರಶ್ನಿಸಿದರು.  

‘ಸರ್ಕಾರ ಹಿಂದೂವಾದಿಗಳನ್ನು ಮುಗಿಸುವ ಷಡ್ಯಂತ್ರ ನಡೆಸುತ್ತಿದೆ. ಹತ್ಯೆ ಪ್ರಕರಣಗಳ ತನಿಖೆಗೆ ಈವರೆಗೂ ಎಸ್‌ಐಟಿಯನ್ನು ನೇಮಿಸಿಲ್ಲ. ಈ ಬಗ್ಗೆ ಮೀನಮೇಷ ಎಣಿಸುತ್ತಿರುವ ಪೊಲೀಸ್‌ ಅಧಿಕಾರಿಗಳ ವಿಚಾರಣೆ ನಡೆಸಿ, ಶೀಘ್ರ ಕ್ರಮ ಕೈಗೊಳ್ಳಬೇಕು. ಕೂಡಲೇ ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ) ಜಾರಿಗೊಳಿಸಿ, ಸೂಕ್ತ ನ್ಯಾಯ ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು. 

‘ಇತ್ತೀಚೆಗೆ ಬಂಧನಕ್ಕೊಳಪಟ್ಟ ವಿಚಾರವಾದಿಗಳ ನೆರವಿಗೆ ಧಾವಿಸಿದ ರಾಜ್ಯ ಮಾನವ ಹಕ್ಕುಗಳ ಆಯೋಗ, ‘ಎಡ’ಕ್ಕೊಂದು ನ್ಯಾಯ, ‘ಬಲ’ಕ್ಕೊಂದು ನ್ಯಾಯ ನೀಡಿದೆ. ಗೌರಿ ಹತ್ಯೆಗೆ ಸಂಬಂಧ‍ಪಟ್ಟಂತೆ ಗುಡ್ಡ ಅಗೆದು ಇಲಿ ಹುಡುಕುವ ಕೆಲಸ ಮಾಡುತ್ತಿದೆ ಎಸ್‌ಐಟಿ ತಂಡ. ಈ ಮೂಲಕ ಜನರ ದಿಕ್ಕನ್ನು ತಪ್ಪಿಸುತ್ತಿದೆ’ ಎಂದು ಹಿಂದೂ ವಿಧಿಜ್ಞ ಪರಿಷತ್ತಿನ ರಾಷ್ಟ್ರೀಯ ಉಪಾಧ್ಯಕ್ಷ ಅಮೃತೇಶ ಅವರು ಹರಿಹಾಯ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 4

  Angry

Comments:

0 comments

Write the first review for this !