ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಜಯಭೇರಿ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕೇಪ್‌ಟೌನ್‌: ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು ಕೇವಲ 107 ರನ್‌ಗಳಿಗೆ ಕೆಡವಿದ ದಕ್ಷಿಣ ಆಫ್ರಿಕಾ ಮೂರನೇ ಟೆಸ್ಟ್ ಕ್ರಿಕೆಟ್‌ ಪಂದ್ಯದಲ್ಲಿ 322 ರನ್‌ಗಳ ಜಯ ಸಾಧಿಸಿದೆ.

ನಾಲ್ಕನೇ ದಿನವಾದ ಭಾನುವಾರ 430 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡಕ್ಕೆ ಐದು ವಿಕೆಟ್ ಕಬಳಿಸಿದ ಮಾರ್ನೆ ಮಾರ್ಕೆಲ್‌ ಆಘಾತ ನೀಡಿದರು. ಎರಡು ವಿಕೆಟ್ ಕಬಳಿಸಿ ಕೇಶವ್‌ ಮಹಾರಾಜ್ ಮಿಂಚಿದರು.

‌ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್‌:
97.5 ಓವರ್‌ಗಳಲ್ಲಿ 311; ಆಸ್ಟ್ರೇಲಿಯಾ, ಮೊದಲ ಇನಿಂಗ್ಸ್‌: 69.5 ಓವರ್‌ಗಳಲ್ಲಿ 255; ದಕ್ಷಿಣ ಆಫ್ರಿಕಾ, ಎರಡನೇ ಇನಿಂಗ್ಸ್‌ (ಶನಿವಾರದ ಅಂತ್ಯಕ್ಕೆ 72 ಓವರ್‌ಗಳಲ್ಲಿ 5ಕ್ಕೆ 238): 112.2 ಓವರ್‌ಗಳಲ್ಲಿ 373 (ಎಬಿ ಡಿವಿಲಿಯರ್ಸ್‌ 63, ಕ್ವಿಂಟನ್ ಡಿಕಾಕ್‌ 65, ವೆರ್ನಾನ್ ಫಿಲಾಂಡರ್‌ ಔಟಾಗದೆ 52, ಕಗಿಸೊ ರಬಾಡ 20; ಜೋಶ್‌ ಹ್ಯಾಜಲ್‌ವುಡ್ 69ಕ್ಕೆ3, ಪ್ಯಾಟ್ ಕಮಿನ್ಸ್‌ 67ಕ್ಕೆ3, ನೇಥನ್ ಲಿಯಾನ್ 102ಕ್ಕೆ3);
ಆಸ್ಟ್ರೇಲಿಯಾ, ಎರಡನೇ ಇನಿಂಗ್ಸ್‌: 39.4 ಓವರ್‌ಗಳಲ್ಲಿ 107 (ಕ್ಯಾಮರಾನ್ ಬ್ಯಾಂಕ್ರಾಫ್ಟ್‌ 26, ಡೇವಿಡ್ ವಾರ್ನರ್‌ 32; ಕಗಿಸೊ ರಬಾಡ 31ಕ್ಕೆ1, ಮಾರ್ನೆ ಮಾರ್ಕೆಲ್‌ 23ಕ್ಕೆ5, ಕೇಶವ್ ಮಹಾರಾಜ್‌ 32ಕ್ಕೆ2).
ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ 322 ರನ್‌ಗಳ ಜಯ; ಪಂದ್ಯಶ್ರೇಷ್ಠ: ಮಾರ್ನೆ ಮಾರ್ಕೆಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT