ಬುಧವಾರ, ಜನವರಿ 22, 2020
26 °C

ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿದ ಮುಸ್ಲಿಂ ಯುವಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಡಗೋಡ: ಅಲ್ಲಿ ಜಾತಿ, ಧರ್ಮದ ಬೇಧವಿರಲಿಲ್ಲ. ತಿನ್ನುವ ಅನ್ನ, ಕುಡಿಯುವ ನೀರು ಒಂದೇ ಎಂಬ ಭಾವನೆಯಲ್ಲಿ ಮುಸ್ಲಿಂ ಯುವಕರು, ಅಯ್ಯಪ್ಪ ಮಾಲಾಧಾರಿಗಳಿಗೆ ಊಟ ಬಡಿಸಿ, ಕೋಮು ಸೌಹಾರ್ದತೆ ಮೆರೆದರು.

ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸಂಜೆ 15ಕ್ಕೂ ಹೆಚ್ಚು ಮುಸ್ಲಿಂ ಯುವಕರು ಊಟದ ವ್ಯವಸ್ಥೆ ಮಾಡಿದ್ದರು. 85ಕ್ಕೂ ಅಧಿಕ ಅಯ್ಯಪ್ಪ ಮಾಲಾಧಾರಿಗಳಿಗೆ ಅವರೇ ಮುಂದಾಗಿ ನಿಂತು ಊಟ ಬಡಿಸಿದರು. ಗುರುಸ್ವಾಮಿಗೆ ಸನ್ಮಾನಿಸಿ, ಅಯ್ಯಪ್ಪ ಮಾಲಾಧಾರಿಗಳ ಜೊತೆಗೂಡಿ ಊಟ ಮಾಡಿದರು. ಈ ಮೂಲಕ ಏಕತೆಯ ಸಂದೇಶಕ್ಕೆ ಸಾಕ್ಷಿಯಾದರು.

‘ಕೆಲವು ಮುಸ್ಲಿಂ ಯುವಕರು ಬಂದು, ಅಯ್ಯಪ್ಪ ಸ್ವಾಮಿಗೆ ಪೂಜೆ ಹಾಗೂ ವ್ರತಧಾರಿಗಳಿಗೆ ಒಂದು ಸಂಜೆಯ ಊಟ ಮಾಡಿಸುವುದಾಗಿ ಹೇಳಿದರು. ಅವರ ಆಹಾರ ಕ್ರಮದ ಬಗ್ಗೆ ವಿಚಾರಿಸಿ, ಸಾಮಗ್ರಿಗಳನ್ನು ತಂದು ಕೊಟ್ಟಿದ್ದರು. ಅದನ್ನು ಬಳಸಿ ವ್ರತಧಾರಿಗಳು ಸಿದ್ಧಪಡಿಸಿದ್ದ ಅಡುಗೆಯನ್ನು ಮುಸ್ಲಿಂ ಯುವಕರು ಖುಷಿಯಿಂದ ಬಡಿಸಿದರು. ಮೊದಲ ಬಾರಿಗೆ ಇಂತಹ ಸೌಹಾರ್ದ ಕಾರ್ಯಕ್ರಮ ನಡೆದಿದೆ’ ಎಂದು ಗುರುಸ್ವಾಮಿ ಹನಮಂತ ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ನೇಹಿತರೆಲ್ಲ ಸೇರಿ ಅಯ್ಯಪ್ಪ ವ್ರತಾಧಾರಿಗಳಿಗೆ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಿದ್ದೆವು. ಪ್ರಚಾರಕ್ಕಾಗಿ ಇದನ್ನು ಮಾಡಿದ್ದಲ್ಲ. ಎಲ್ಲ ವ್ರತಾಧಾರಿಗಳು ಸಹಕಾರ ನೀಡಿದರು’ ಎಂದು ಸೋಫಿಯಾನ ಶೇಖ್ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು