ಸೋಮವಾರ, ಸೆಪ್ಟೆಂಬರ್ 16, 2019
22 °C

ಮೂಡ್ಲಹಟ್ಟಿ: ಕೊಳವೆಬಾವಿಯಿಂದ ಚಿಮ್ಮಿದ ಜಲಧಾರೆ, ರೈತನ ಮಂದಹಾಸ

Published:
Updated:
Prajavani

ಹಿರಿಯೂರು: ತಾಲ್ಲೂಕಿನ ಮೂಡ್ಲಹಟ್ಟಿ ಗ್ರಾಮದ ರೈತ ಈರಣ್ಣ ಅವರ ತೆಂಗಿನ ತೋಟದಲ್ಲಿ ಶನಿವಾರ ಕೊಳವೆಬಾವಿ ಕೊರೆಸಿ ನಿಲ್ಲಿಸಿದ ಐದು ನಿಮಿಷಗಳ ಬಳಿಕ ಬರಗಾಲದ ನಡುವೆಯೂ ಏಕಾಏಕಿ 10 ಅಡಿ ಎತ್ತರಕ್ಕೆ ನೀರು ಚಿಮ್ಮುವ ಮೂಲಕ ಅಚ್ಚರಿ ಮೂಡಿಸಿತು.

‘480 ಅಡಿ ಆಳಕ್ಕೆ ಕೊಳವೆಬಾವಿ ಕೊರೆಸಿದಾಗ ಎರಡು ಇಂಚು ನೀರು ಬಂತು. ಇಷ್ಟು ನೀರು ಸಾಕು ಎಂದು ಲಾರಿಯವರಿಗೆ ಹೇಳಿ ಕೆಲಸ ನಿಲ್ಲಿಸಿದ್ದೆ. ಇದಾದ ಐದು ನಿಮಿಷ ಬಳಿಕ ಏಕಾಏಕಿ ಕೆಸರು ಸಮೇತ ನೀರು ಕೊಳವೆಯಿಂದ ಚಿಮ್ಮಿತು. ಒಂದು ಗಂಟೆ ಕಾಲ ನೀರು ಚಿಮ್ಮಿದ ನಂತರ ಹೊರ ಬರುವುದು ನಿಂತಿತು’ ಎಂದು ಈರಣ್ಣ ತಿಳಿಸಿದರು.

‘ಒಂದು ವರ್ಷದ ಹಿಂದೆ 80–100 ಅಡಿ ಕೊರೆಸಿದರೆ ಸಾಕಷ್ಟು ನೀರು ಸಿಗುತ್ತಿತ್ತು. ಈ ವರ್ಷ 500 ಅಡಿಯವರೆಗೆ ಕೊರೆಸಬೇಕಿದೆ. ನೀರು ಉಕ್ಕಿದ ನಂತರ ಮೊದಲು ಬಂದಷ್ಟೇ ನೀರು ಬರುತ್ತದೆಯೋ ಅಥವಾ ಉಕ್ಕಿರುವ ಪ್ರಮಾಣದಲ್ಲಿ ನೀರು ಬರಲಿದೆಯೋ ಎಂಬುದು ಮೋಟರ್ ಇಳಿಸಿದ ನಂತರ ತಿಳಿಯುತ್ತದೆ. ಈಗ ಸಿಕ್ಕಿರುವ ನೀರು ತೋಟ ಉಳಿಸಿಕೊಳ್ಳಲು ಸಾಲುತ್ತದೆ’ ಎಂದು ಅವರು ಪ್ರತಿಕ್ರಿಯಿಸಿದರು.

ನೀರು ಚಿಮ್ಮುತ್ತಿದ್ದ ದೃಶ್ಯವನ್ನು ರೈತರು ಮೊಬೈಲ್‌ನಲ್ಲಿ ವಿಡಿಯೊ ಮಾಡಿಕೊಂಡಿದ್ದಾರೆ.

Post Comments (+)