‘ಹಿರೂರು ವಿಶ್ವವಿದ್ಯಾಲಯಕ್ಕೂ ಉಗ್ರರಿಗೂ ನಂಟು’

7

‘ಹಿರೂರು ವಿಶ್ವವಿದ್ಯಾಲಯಕ್ಕೂ ಉಗ್ರರಿಗೂ ನಂಟು’

Published:
Updated:
Prajavani

ಬೆಂಗಳೂರು: ಹಾವೇರಿ ಜಿಲ್ಲೆ ಹಾನಗಲ್‌ ತಾಲ್ಲೂಕಿನ ಹಿರೂರಿನಲ್ಲಿ ಕೇರಳ ಮೂಲದವರು ಆರಂಭಿಸಿರುವ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳು ಗಣರಾಜ್ಯೋತ್ಸವ, ಗಣೇಶ ಹಬ್ಬ ಮತ್ತು ಬಸವೇಶ್ವರ ರಥೋತ್ಸವಕ್ಕೆ ಅಡ್ಡಿಪಡಿಸಿ ಅಶಾಂತಿಗೆ ಕಾರಣರಾಗುತ್ತಿದ್ದಾರೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸಪೂಜಾರಿ ದೂರಿದರು.

ಗಣರಾಜ್ಯೋತ್ಸವ ಸಂದರ್ಭ ಸರ್ಕಾರಿ ಶಾಲಾ ಮಕ್ಕಳು ರಾಷ್ಟ್ರ ಧ್ವಜ ಹಿಡಿದು ಮೆರವಣಿಗೆ ಹೊರಟಾಗ ಮಕ್ಕಳ ಮೇಲೆ ಹಲ್ಲೆ ನಡೆಸಿ, ಬಾವುಟ ಕಸಿದುಕೊಂಡ ಘಟನೆ ನಡೆಯಿತು. ಇದಕ್ಕೆ ಈ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಕಾರಣ. ಸಾರ್ವಜನಿಕರ ಒತ್ತಡದ ಮೇರೆಗೆ ಆರೋಪಿಗಳನ್ನು ಬಂಧಿಸಿ ಎಫ್‌ಐಆರ್‌ ದಾಖಲಿಸಿತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಒತ್ತಡ ಮೇರೆಗೆ ಬಂಧಿತರನ್ನು ಬಿಡುಗಡೆ ಮಾಡಲಾಯಿತು. ಬಂಧನಕ್ಕೆ ಒಳಗಾದವರು ಕಾಶ್ಮೀರ ಮೂಲದವರು ಎಂದು ಪೂಜಾರಿ ಹೇಳಿದರು.

ಈ ವಿಶ್ವವಿದ್ಯಾಲಯಕ್ಕೂ ಕಾಶ್ಮೀರ ಮೂಲದ ಉಗ್ರರಿಗೂ ನಂಟು ಇದೆ ಎಂದೂ ಪೂಜಾರಿ ಆರೋಪಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !