ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಅಂಗಳದಲ್ಲಿ ಪ್ರಜ್ಞಾನ್‌ ವಿಕ್ರಮ್

Last Updated 6 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಹತ್ವಾಕಾಂಕ್ಷೆಯ ಯೋಜನೆ ಚಂದ್ರಯಾನ–2ರ ಅತ್ಯಂತ ಮಹತ್ವದ ಘಟ್ಟ ‘ಲ್ಯಾಂಡಿಂಗ್’. ‘ಪ್ರಜ್ಞ್ಯಾನ್’ ರೋವರ್‌ ನೌಕೆಯನ್ನು ಹೊತ್ತಿರುವ ‘ವಿಕ್ರಮ್’ ಲ್ಯಾಂಡರ್‌ ನೌಕೆಯು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿರುವ ಮಹತ್ವದ ಮತ್ತು ಕ್ಲಿಷ್ಟ ಕಾರ್ಯಾಚರಣೆ ಇದು. ಈ ಕಾರ್ಯಾಚರಣೆಯಲ್ಲಿ ಬಳಕೆಯಾಗುವ ತಂತ್ರಜ್ಞಾನ, ಸಲಕರಣೆಗಳು ಮತ್ತು ಅತ್ಯಂತ ಹಗುರವಾಗಿ ಚಂದ್ರನ ನೆಲದ ಮೇಲಿಳಿಯುವ ಮೃದು ನೆಲಸ್ಪರ್ಶ (ಸಾಫ್ಟ್‌ ಲ್ಯಾಂಡಿಂಗ್) ಕಾರ್ಯಾಚರಣೆಯ ವಿವರವನ್ನು ಇಸ್ರೊ ಹಂಚಿಕೊಂಡಿದೆ

1 ಚಂದ್ರ ದಿನ (ಭೂಮಿಯ 14 ದಿನಗಳಿಗೆ ಸಮ)

ವಿಕ್ರಂ ಮತ್ತು ಪ್ರಜ್ಞಾನ್‌ ನೌಕೆಗಳು ಚಂದ್ರನ ಮೇಲೆ ಕಾರ್ಯನಿರ್ವಹಿಸುವ ಅವಧಿ

ವಿಕ್ರಂ ಲ್ಯಾಂಡರ್

ಎಲ್‌ಪಿಡಿಸಿ

ಲ್ಯಾಂಡರ್ ಪೊಸಿಷನ್ ಡೆಟೆಕ್ಷನ್ ಕ್ಯಾಮೆರಾ. ವಿಕ್ರಂ ನೌಕೆ ಇಳಿಯಬೇಕಾದ ನೆಲದ ಮೇಲ್ಮೈ ಅನ್ನು ಈ ಕ್ಯಾಮೆರಾ ಪರಿಶೀಲಿಸಲಿದೆ. ಸಮತಟ್ಟಾದ ನೆಲದಲ್ಲಿ ವಿಕ್ರಂ ಇಳಿಯಲು ಇದು ನೆರವಾಗಲಿದೆ

ಎಲ್‌ಎಚ್‌ವಿಸಿ

ಲ್ಯಾಂಡರ್ ಹಾರಿಝಾಂಟಲ್ ವೆಲಾಸಿಟಿ ಕ್ಯಾಮೆರಾ. ವಿಕ್ರಂ ನೌಕೆಯು ಚಂದ್ರನ ಮೇಲ್ಮೈನತ್ತ ಇಳಿಯುವಾಗ, ನೌಕೆಯ ವೇಗವನ್ನು ಇದು ಪರಿಶೀಲಿಸುತ್ತದೆ. ಇದು ನೀಡುವ ದತ್ತಾಂಶಗಳ ಆಧಾರದ ಮೇಲೆ ನೌಕೆಯ ವೇಗವನ್ನು ನಿಯಂತ್ರಿಸಲಾಗುತ್ತದೆ

ಆಲ್ಟಿಮೀಟರ್–1

ನೌಕೆಯು ಚಂದ್ರನ ಮೇಲ್ಮೈನಿಂದ ಎಷ್ಟು ಎತ್ತರದಲ್ಲಿದೆ ಎಂಬುದನ್ನು ಪರಿಶೀಲಿಸಲು ಈ ಆಲ್ಟಿಮೀಟರ್‌ ಅನ್ನು ಬಳಸಲಾಗುತ್ತದೆ

ಆಲ್ಟಿಮೀಟರ್–2

ವಿಕ್ರಂ ನೌಕೆಯು ಚಂದ್ರನ ಮೇಲ್ಮೈನಿಂದ ಕೆಲವೇ ಮೀಟರ್‌ ಎತ್ತರದಲ್ಲಿದ್ದಾಗ ಈ ಆಲ್ಟಿಮೀಟರ್ ಕೆಲಸ ಮಾಡುತ್ತದೆ. ಇದು ನೀಡುವ ದತ್ತಾಂಶಗಳ ಆಧಾರದ ಮೇಲೆ ಸಣ್ಣ ಎಂಜಿನ್‌ಗಳನ್ನು ಬಂದ್ ಮಾಡಲಾಗುತ್ತದೆ. ಪ್ರಮುಖ ಎಂಜಿನ್‌ ಅನ್ನು ಚಾಲೂ ಮಾಡಲಾಗುತ್ತದೆ

ಲೇಸರ್ ಆಲ್ಟಿಮೀಟರ್‌

ಆಲ್ಟಿಮೀಟರ್‌ಗಳು ಮಾಡುವ ಕೆಲಸವನ್ನೇ ಲೇಸರ್ ಆಲ್ಟಿಮೀಟರ್ ಸಹ ಮಾಡಲಿದೆ

ಲಿಕ್ಟಿಡ್ ಎಂಜಿನ್‌

ಇಂತಹ ನಾಲ್ಕು ಎಂಜಿನ್‌ಗಳನ್ನು ವಿಕ್ರಂ ನೌಕೆ ಹೊಂದಿದೆ. ಚಂದ್ರನ ಕಕ್ಷಯಲ್ಲಿ ಚಲಿಸುವಾಗ ನೌಕೆಯ ವೇಗವನ್ನು ಕಡಿಮೆ ಮಾಡಲು ಈ ಎಂಜಿನ್‌ ಅನ್ನು ಬಳಸಲಾಗುತ್ತದೆ. ಆನಂತರ ನೌಕೆಯ ಚಲನೆಯ ದಿಕ್ಕನ್ನು ಬದಲಿಸಲೂ ಈ ಎಂಜಿನ್‌ ಬಳಸಲಾಗುತ್ತದೆ. ನಂತರ ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹ ಬರುವವರೆಗೂ ಈ ಎಂಜಿನ್‌ಗಳು ಬಳಕೆಯಾಗಲಿವೆ

ನೆಲಸ್ಪರ್ಶ ಸಂವೇದಕಗಳು

ವಿಕ್ರಂ ನೌಕೆಯು ಚಂದ್ರನ ನೆಲವನ್ನು ಸ್ಪರ್ಶಿಸಿದಾಗ ಆ ಮಾಹಿತಿಯನ್ನು ರವಾನಿಸುವ ಕೆಲಸವನ್ನು ಈ ಸಂವೇದಕಗಳು ಮಾಡಲಿವೆ. ಈ ಸಂದೇಶ ರವಾನೆಯಾದ ನಂತರವೇ ಪ್ರಜ್ಞಾನ್‌ ರೋವರ್ ನೌಕೆಯು ವಿಕ್ರಂನಿಂದ ಕೆಳಗೆ ಇಳಿಯಲಿದೆ

ಎಲ್‌ಎಚ್‌ಡಿಎಸಿ

ಲ್ಯಾಂಡರ್ ಹಜರ್ಡ್‌ ಡಿಟೆಕ್ಷನ್ ಆ್ಯಂಡ್ ಅವಾಯ್ಡೆನ್ಸ್ ಕ್ಯಾಮೆರಾ. ವಿಕ್ರಂ ನೌಕೆಯು ನೆಲಸ್ಪರ್ಶಿಸುವ ವೇಳೆ ಯಾವುದೇ ಅಡೆತಡೆ ಇದೆಯೇ ಎಂಬುದನ್ನು ಈ ಕ್ಯಾಮೆರಾ ಪರಿಶೀಲಿಸುತ್ತದೆ. ಅಂತಹ ಅಡೆತಡೆಗಳಿದ್ದಲ್ಲಿ, ಅದನ್ನು ತಪ್ಪಿಸಲು ಅಗತ್ಯ ಮಾಹಿತಿಯನ್ನೂ ಇದು ನೀಡುತ್ತದೆ

ಸೌರಫಲಕಗಳು

ಚಂದ್ರನ ಮೇಲ್ಮೈ ಮೇಲೆ ವಿಕ್ರಂ ನೌಕೆಯು ಕಾರ್ಯನಿರ್ವಹಿಸಲು ಬೇಕಾದ ವಿದ್ಯುತ್ ಶಕ್ತಿಯನ್ನು ಈ ಸೌರ ಫಲಕಗಳು ಒದಗಿಸುತ್ತವೆ

ಪ್ರಜ್ಞಾನ್ ರೋವರ್

ವಿಕ್ರಂ ಲ್ಯಾಂಡರ್‌ನಿಂದಪ್ರಜ್ಞಾನ್ ರೋವರ್ ಇಳಿಯಲಿದೆ.

500 ಮೀಟರ್ವಿಕ್ರಂನಿಂದ ಇಳಿದ ನಂತರ ಪ್ರಜ್ಞಾನ್ ಕ್ರಮಿಸಲಿರುವ ದೂರ

1 ಸೆಂ.ಮೀ.ಪ್ರತಿ ಒಂದು ಸೆಕೆಂಡ್‌ಗೆ ಪ್ರಜ್ಞಾನ್‌ ನೌಕೆ ಚಲಿಸಲಿರುವ ವೇಗ

1. ಚಂದ್ರನ ಮೇಲ್ಮೈನಲ್ಲಿರುವ ವಸ್ತುಗಳನ್ನು ಪ್ರಜ್ಞಾನ್ ನೌಕೆಯಲ್ಲಿರುವ ‘ಆಲ್ಫಾ ಸ್ಪೆಕ್ಟ್ರೊಮೀಟರ್’ ಪರಿಶೀಲಿಸಲಿದೆ. ಚಂದ್ರನ ಮೇಲ್ಮೈನ ವಸ್ತುಗಳ ಧಾತುಸಂಯೋಜನೆಯ ಮಾಹಿತಿಯನ್ನು ಇದರ ಮೂಲಕ ಪಡೆಯಬಹುದಾಗಿದೆ

2. ಚಂದ್ರನ ಮೇಲ್ಮೈನಲ್ಲಿರುವ ವಸ್ತುಗಳ ಪ್ರಮಾಣವನ್ನು ಲೆಕ್ಕಹಾಕುವುದು ಪ್ರಜ್ಞಾನ್‌ನ ಮತ್ತೊಂದು ಪ್ರಮುಖ ಕೆಲಸ. ಪ್ರಜ್ಞಾನ್‌ನಲ್ಲಿರುವ ‘ಲೇಸರ್ ಸ್ಪೆಕ್ಟ್ರೊಮೀಟರ್’ ಈ ಕೆಲಸ ಮಾಡಲಿದೆ. ಲೇಸರ್ ಕಿರಣಗಳನ್ನು ಇದು ಹಾಯಿಸುತ್ತದೆ. ವಸ್ತುಗಳಿಂದ ಪ್ರತಿಫಲಿಸುವ ಪ್ಲಾಸ್ಮಾ ಕಿರಣಗಳನ್ನು ಲೆಕ್ಕಹಾಕಿ ವಸ್ತುಗಳ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ

ನೆಲಸ್ಪರ್ಶ ಕಾರ್ಯಾಚರಣೆ

1. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ವಿಕ್ರಂ ನೌಕೆಯ ವೇಗವನ್ನು ತಗ್ಗಿಸಲಾಗುತ್ತದೆ. ವಿಕ್ರಂನಲ್ಲಿರುವ ನಾಲ್ಕು ಲಿಕ್ಟಿಡ್‌ ಎಂಜಿನ್‌ಗಳನ್ನು ಚಾಲೂ ಮಾಡಿ ಈ ಕಾರ್ಯಾಚರಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಚಂದ್ರನ ಮೇಲ್ಮೈನಿಂದ 100 ಕಿ.ಮೀ. ಎತ್ತರದಲ್ಲಿ ವಿಕ್ರಂ ನೌಕೆ ಇರಲಿದೆ. ನೌಕೆಯ ವೇಗ ತಗ್ಗಿದ ಕಾರಣ ಚಂದ್ರನ ಮೇಲ್ಮೈ ಮತ್ತು ನೌಕೆಯ ನಡುವಣ ಅಂತರ ಕಡಿಮೆಯಾಗಲಿದೆ

2. ಚಂದ್ರನ ಮೇಲ್ಮೈನಿಂದ 30 ಕಿ.ಮೀ. ಎತ್ತರದಲ್ಲಿ ಇರುವಾಗ ನೌಕೆಯ ಚಲನೆಯ ದಿಕ್ಕು ಬದಲಾಗಲಿದೆ. ನೌಕೆಯ ಚಲನೆ ಇಳಿಮುಖವಾಗಲಿದೆ

3. ಚಂದ್ರನ ಮೇಲ್ಮೈ ಅನ್ನು ಎಲ್‌ಪಿಡಿ ಕ್ಯಾಮೆರಾ ಪರಿಶೀಲಿಸಲಿದೆ. ಈ ಸಂದರ್ಭದಲ್ಲಿ ನೌಕೆಯು ಚಂದ್ರನ ಮೇಲ್ಮೈನಿಂದ 400 ಮೀಟರ್‌ನಷ್ಟು ಎತ್ತರದಲ್ಲಿ ಇರಲಿದೆ. ಸೂಕ್ತ ಸ್ಥಳ ದೊರೆತಾಗ ನೌಕೆ ಮತ್ತಷ್ಟು ಕೆಳಗೆ ಇಳಿಯಲಿದೆ

4. ನೌಕೆಯ ವೇಗ ಮತ್ತಷ್ಟು ತಗ್ಗಲಿದೆ. ಎರಡು ಎಂಜಿನ್‌ಗಳಷ್ಟೇ ಚಾಲೂ ಆಗಿರಲಿವೆ. ನೌಕೆ ಇಳಿಯುವಾಗ ಯಾವುದಾದರೂ ಅಡೆತಡೆ ಇದೆಯೇ ಎಂಬುದನ್ನು ಎಲ್‌ಎಚ್‌ಡಿಎ ಕ್ಯಾಮೆರಾ ಪರಿಶೀಲಿಸಲಿದೆ. ನೌಕೆ ಮತ್ತಷ್ಟು ಕೆಳಗೆ ಇಳಿಯಲಿದೆ

5. ಚಂದ್ರನ ಮೇಲ್ಮೈನಿಂದ 10 ಮೀಟರ್‌ನಷ್ಟು ಮಾತ್ರ ಎತ್ತರದಲ್ಲಿರುವಾಗ ಲಿಕ್ಟಿಡ್‌ ಎಂಜಿನ್‌ಗಳು ಬಂದ್ ಆಗಲಿವೆ. ಪ್ರಮುಖ ಎಂಜಿನ್ ಚಾಲೂ ಆಗಲಿದೆ. ನೌಕೆಯ ಇಳಿಮುಖ ವೇಗ ಮತ್ತಷ್ಟು ತಗ್ಗಲಿದೆ. ನೌಕೆ ನೆಲವನ್ನು ಸ್ಪರ್ಶಿಸಲಿದೆ. ಎಂಜಿನ್ ಬಂದ್ ಆಗಲಿದೆ. ಆನಂತರ ಪ್ರಜ್ಞಾನ್ ನೌಕೆ ವಿಕ್ರಂ ನೌಕೆಯಿಂದ ಕಳೆಗೆ ಇಳಿಯಲಿದೆ

ಆಧಾರ: ಇಸ್ರೊ

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT