ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸ ಪಠ್ಯ ಪುಸ್ತಕ ಲೇಖಕ, ನಿವೃತ್ತ ಪ್ರಾಚಾರ್ಯ ಪಾಲಾಕ್ಷ ನಿಧನ

Last Updated 4 ಜೂನ್ 2019, 20:15 IST
ಅಕ್ಷರ ಗಾತ್ರ

ತಿಪಟೂರು: ಪದವಿ ತರಗತಿಗಳ ಇತಿಹಾಸ ಪಠ್ಯ ಪುಸ್ತಕ ಬರೆದು ನಾಡಿನೆಲ್ಲೆಡೆ ಖ್ಯಾತರಾಗಿದ್ದ ಇಲ್ಲಿನ ಪಲ್ಲಾಗಟ್ಟಿ ಅಡವಪ್ಪ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪಾಲಾಕ್ಷ (78) ಮಂಗಳವಾರ ತುಮಕೂರಿನ ಸ್ವಗೃಹದಲ್ಲಿ ನಿಧನರಾದರು.

ಮೃತರ ಅಂತ್ಯ ಸಂಸ್ಕಾರ ಗುಬ್ಬಿ ತಾಲ್ಲೂಕು ಕಡಬಾ ಹೋಬಳಿ ಮೆಳೆಕಲ್ಲಹಳ್ಳಿಯಲ್ಲಿ ಬುಧವಾರ ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

‘ಹಿಸ್ಟರಿ ಪಾಲಾಕ್ಷ’ ಎಂದು ಖ್ಯಾತರಾಗಿದ್ದ ಇತಿಹಾಸಕ್ಕೆ ಸಂಬಂಧಿಸಿ 35ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದರು. ತಮ್ಮದೇ ಶಶಿ ಪ್ರಕಾಶನದ ಮೂಲಕ ಇವರು ಪುಸ್ತಕಗಳನ್ನು ಪ್ರಕಟಿಸಿದ್ದರು. ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗಳಿಗೆ ಸಂಬಂಧಿಸಿಯೂ ಇವರು ಪುಸ್ತಕಗಳನ್ನು ಬರೆದಿದ್ದರು. ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು 2001ರಲ್ಲಿ ನಿವೃತ್ತರಾಗಿ ನಂತರ ಅವರು ತುಮಕೂರಿನಲ್ಲಿ ನೆಲೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT