ಭಾನುವಾರ, ಆಗಸ್ಟ್ 25, 2019
20 °C

ಪ್ರವಾಹಪೀಡಿತ ಪ್ರದೇಶಕ್ಕೆ ಬನ್ನಿ: ಎಚ್‌.ಕೆ ಪಾಟೀಲ್

Published:
Updated:

ಬೆಂಗಳೂರು: ಕೃಷ್ಣಾ ಹಾಗೂ ಉಪನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿ ಪ್ರವಾಸ ರದ್ದುಪಡಿಸಿ, ‍ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಶಾಸಕ ಎಚ್.ಕೆ.ಪಾಟೀಲ ಆಗ್ರಹಿಸಿದ್ದಾರೆ.

ಗಂಭೀರ ‍ಪರಿಸ್ಥಿತಿ ಇದ್ದರೂ ಸಮರೋಪಾದಿಯಲ್ಲಿ ತುರ್ತು ಪರಿಹಾರ ಕಾರ್ಯಗಳು ನಡೆಯುತ್ತಿಲ್ಲ. ಆಡಳಿತ ಯಂತ್ರ ಸನ್ನದ್ಧವಾಗಿಲ್ಲ. ಎನ್‌ಡಿಆರ್‌ಎಫ್, ದೋಣಿ ರಕ್ಷಣಾ ತಂಡವನ್ನು ಮತ್ತಷ್ಟು ಸನ್ನದ್ಧ ಸ್ಥಿತಿಯಲ್ಲಿಡಬೇಕು. ಈ ಪ್ರದೇಶಗಳಿಗೆ ಮುಖ್ಯಮಂತ್ರಿ ಭೇಟಿ ಕೊಡಬೇಕು, ಪ್ರಧಾನಿ ಸಹ ಭೇಟಿ ನೀಡುವಂತೆ ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿ ಭರವಸೆ: ಪರಿಹಾರ ಕಲ್ಪಿಸಲು ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳ ಜಿಲ್ಲಾ ಆಡಳಿತ ಸಜ್ಜುಗೊಳಿಸಲಾಗಿದೆ. ದೆಹಲಿ ಭೇಟಿ ಸಮಯದಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆದು ನೆರವು ಕೋರಲಾಗುವುದು ಎಂದು ಎಚ್.ಕೆ.ಪಾಟೀಲ ಅವರಿಗೆ ಯಡಿಯೂರಪ್ಪ ಪತ್ರ ಬರೆದು ಸ್ಪಷ್ಟಪಡಿಸಿದ್ದಾರೆ.

 

Post Comments (+)