ಎಂ.ಬಿ. ಪಾಟೀಲರ ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ

ಬುಧವಾರ, ಮಾರ್ಚ್ 20, 2019
23 °C

ಎಂ.ಬಿ. ಪಾಟೀಲರ ತರಾಟೆಗೆ ತೆಗೆದುಕೊಂಡ ಮಲ್ಲಿಕಾರ್ಜುನ

Published:
Updated:
Prajavani

ದಾವಣಗೆರೆ: ‘ನಾವೆಲ್ಲ ಹಿಂದೆ ಹೋಗಿ ಬಿಟ್ಟಿದ್ದೀವಿ. ನಾನು ಸೋತು ಸುಣ್ಣವಾಗಿದ್ದೀನಿ. ನೀನು ಮಂತ್ರಿ ಆಗಿಬಿಟ್ಟಿದ್ದಿ ಎಂದು ಎಂದು ಇಲ್ಲದ್ದನ್ನೆಲ್ಲ ಹೇಳಿದ್ರೆ... ನಿಂಗೇನು ಗೊತ್ತೈತಿ ನಮ್ಮ ವಿಚಾರಗಳು, ನಮ್ಮ ಅಪ್ಪ ಮಕ್ಕಳದ್ದು’

ಗೃಹ ಸಚಿವ ಎಂ.ಬಿ.ಪಾಟೀಲ ಬುಧವಾರ ಮಧ್ಯಾಹ್ನ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನೆಗೆ ಊಟಕ್ಕೆ ಬಂದಾಗ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತರಾಟೆಗೆ ತೆಗೆದುಕೊಂಡ ಪರಿ ಇದು.

‘ನಿಮ್ಮ ಅಪ್ಪನ ಕಾಲದಾಗ ನಿನ್ನ ಸಂಸ್ಥೆಯ ಜೋಳಿಗೆಯಲ್ಲಿಟ್ಟುಕೊಂಡು ಕಟ್ಟಿದವರನ್ನು ಹೊರಗೆ ಹಾಕಲಾಗಿತ್ತು’ ಎಂದು ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಶಾಮನೂರು, 'ಆ ವಿಚಾರಗಳೆಲ್ಲ ಈಗ ಬೇಡ 'ಎಂದು ಪಾಟೀಲರನ್ನು ಊಟಕ್ಕೆ ಕರೆದುಕೊಂಡು ಹೋದರು. ಮಲ್ಲಿಕಾರ್ಜುನ ಹೊರಗೆ ನಡೆದರು.

ನಾವು ಗೆಳೆಯರು: ‘ನಾನು ಮತ್ತು ಮಲ್ಲಿಕಾರ್ಜುನ ಗೆಳೆಯರು. ಸಹೋದರರು ಇದ್ದಂತೆ. ನಾವು ಯಾವಾಗಲೂ ಹಾಗೆಯೇ ಮಾತನಾಡುವುದು. ಅದರಲ್ಲಿ ವಿಶೇಷ ಏನಿಲ್ಲ’ ಎಂದು ಎಂ.ಬಿ. ಪಾಟೀಲರು ಊಟ ಆದ ಮೇಲೆ ಸ್ಪಷ್ಟನೆ ನೀಡಿದರು.

‘ಲಿಂಗಾಯತ ಹೋರಾಟದಿಂದಾಗಿ ಶಿಕ್ಷೆ ಅನುಭವಿಸಿದೆ’

ದಾವಣಗೆರೆ: ‘ಲಿಂಗಾಯತ ಧರ್ಮದ ಹೋರಾಟದಿಂದಾಗಿ ಶಿಕ್ಷೆ ಅನುಭವಿಸಿದೆ. ಬಸವಣ್ಣ ಅನುಭವಿಸಿದ ಶಿಕ್ಷೆಯ ಮುಂದೆ ಇದೇನೂ ದೊಡ್ಡ ಸಂಗತಿ ಅಲ್ಲ. 6 ತಿಂಗಳು ಮಂತ್ರಿ ಸ್ಥಾನ ಸಿಗಲಿಲ್ಲ ಅಷ್ಟೇ’ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಬಳಗ, ಅಜ್ಜಂಪುರ ಸೇವಾ ಟ್ರಸ್ಟ್‌ನಿಂದ ಸರಸ್ವತಿ ನಗರ ಬಸವ ಬಳಗದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಲಿಂಗಾಯತ ಧರ್ಮವನ್ನು ಎಂ.ಬಿ. ಪಾಟೀಲ, ಜಾಮದಾರ್‌, ವಿನಯ ಕುಲಕರ್ಣಿ ಅಥವಾ ಇಲ್ಲಿರುವ ಯಾರೂ ಹುಟ್ಟುಹಾಕಿದ್ದಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಹುಟ್ಟುಹಾಕಿದ ಧರ್ಮ ಅದು. ಅದನ್ನು ಎತ್ತಿಹಿಡಿಯುವ ಕೆಲಸವನ್ನಷ್ಟೇ ನಾವು ಮಾಡಿದೆವು. ಇದು ಯಾರ ವಿರುದ್ಧವೂ ಅಲ್ಲ. ಬಸವಣ್ಣನ ಪರವಾದುದು’ ಎಂದು ತಿಳಿಸಿದರು.

‘ಜಾಗತಿಕ ಲಿಂಗಾಯತ ಧರ್ಮ ನನ್ನ ಅಸ್ಮಿತೆ. ನಾನು ಸಚಿವನಾಗಿರುವುದರಿಂದ ಹೋರಾಟದ ಬಗ್ಗೆ ಮಾತನಾಡುವುದಿಲ್ಲ. ಹೋರಾಟವನ್ನು ಲಿಂಗಾಯತ ಮಹಾಸಭಾ, ಜಾಮದಾರ್‌ ನೋಡಿಕೊಳ್ಳುತ್ತಾರೆ. ಆದರೆ ಬುದ್ಧ, ಕ್ರಿಸ್ತ, ಪೈಗಂಬರರ ಸಾಲಲ್ಲಿ ಬಸವಣ್ಣನನ್ನು ಕಾಣಬೇಕು. ಈ ಧರ್ಮ, ಸಂಸ್ಕೃತಿ ಜಾಗತಿಕವಾಗಬೇಕು ಎಂಬುದು ನನ್ನ ಕನಸು. ಅದಕ್ಕಾಗಿ ವಚನಗಳನ್ನು ಆರು ಭಾಷೆಗಳಿಗೆ ಅನುವಾದ ಮಾಡಲು ಚಿಂತನೆ ನಡೆಸಲಾಗಿದೆ’ ಎಂದರು.

ಬರಹ ಇಷ್ಟವಾಯಿತೆ?

 • 19

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !