ಮಂಗಳವಾರ, ನವೆಂಬರ್ 19, 2019
29 °C
ಕೇರಳದ ಐವರು ಆರೋಪಿಗಳ ಬಂಧನ

ಹೋಮ್‌ ಸ್ಟೇಯಲ್ಲಿ ಅನೈತಿಕ ಚಟುವಟಿಕೆ

Published:
Updated:

ಮಡಿಕೇರಿ: ತಾಲ್ಲೂಕಿನ ಕಾಂತೂರು ಮೂರ್ನಾಡು ಗ್ರಾಮದ ಹೋಮ್‌ ಸ್ಟೇಯೊಂದರಲ್ಲಿ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಆರು ಮಂದಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ಹೋಮ್‌ ಸ್ಟೇ ಮಾಲಕಿ ಸೇರಿದಂತೆ ಕೇರಳದ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಕೇರಳದ ದೇವದಾಸನ್, ಶಾಜಿ,  ಮನು, ನಿಷಾದ್‌, ಅಕ್ಷಯ್‌ ಬಂಧಿತರು. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಮತ್ತೊಬ್ಬ ಮಾಲೀಕ ಭೀಮಯ್ಯ ತಲೆಮರೆಸಿಕೊಂಡಿದ್ದಾನೆ. ಬಂಧಿತರಿಂದ ಎರಡು ಕಾರು, ಎರಡು ಬೈಕ್‌, ಆರು ಮೊಬೈಲ್‌ ಹಾಗೂ ₹ 22 ಸಾವಿರ ನಗದು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಮಡಿಕೇರಿ ಸರ್ಕಲ್‌ ಇನ್‌ಸ್ಪೆಕ್ಟರ್ ಅನೂಪ್‌ ಮಾದಪ್ಪ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದರು.

ಪ್ರತಿಕ್ರಿಯಿಸಿ (+)