ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಾಮಿ ನೋಡಿ ರೇಟು ಫಿಕ್ಸ್‌

Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕಲಬುರ್ಗಿ: ಚೆನ್ನೈನ ಅಸ್ತಿತ್ವದಲ್ಲಿ ಇಲ್ಲದ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಜಿಲ್ಲೆಯ ಏಜೆಂಟರು ಉದ್ಯಮಿಗಳು ಹಾಗೂ ಲೇವಾದೇವಿ ವ್ಯವಹಾರ ಮಾಡುವವರಿಗೆ ಗೌರವ ಡಾಕ್ಟರೇಟ್‌ ಕೊಡಿಸಿದ್ದಾರೆ!

ರಾಜ್ಯದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರೆ ಅದರ ಅಸಲಿಯತ್ತು ಗೊತ್ತಾಗಲಿದೆ ಎಂಬುದನ್ನು ಅರಿತು ಗೋವಾ, ದುಬೈನಲ್ಲಿ ಕಾರ್ಯಕ್ರಮ ಆಯೋಜಿಸಿ ಡಾಕ್ಟರೇಟ್‌ ಕೊಡಲಾಗಿದೆ. ಇದಕ್ಕಾಗಿ ಏಜೆಂಟರು ₹ 1 ಲಕ್ಷದಿಂದ ₹ 1.5 ಲಕ್ಷ ಪಡೆದಿದ್ದಾರೆ. ಈಗಲೂ ಏಜೆಂಟರ ಜಾಲ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎನ್ನುತ್ತಾರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೀರಭದ್ರಪ್ಪ ಸಿಂಪಿ.

‘ಕೆಲವ ಪ್ರಭಾವಿಗಳು ಡಾಕ್ಟರೇಟ್‌ ಕೊಡುವ ನಕಲಿ ವಿಶ್ವವಿದ್ಯಾಲಯಗಳು ಹಾಗೂ ಪಡೆಯುವವರ ಮಧ್ಯೆ ಏಜೆಂಟರಾಗಿ ಕೆಲಸ ಮಾಡುತ್ತಾರೆ.ಜಿಲ್ಲೆಯಲ್ಲಿ ಅವರ ಮಾತಿಗೆ ಮನ್ನಣೆ ಕೊಟ್ಟು ಗೌರವ ಡಾಕ್ಟರೇಟ್‌ ಪಡೆಯಲು ಒಪ್ಪುತ್ತಿದ್ದರು. ವ್ಯಕ್ತಿ ಎಷ್ಟು ಕೊಡಬಹುದು ಎಂಬುದರ ಅಂದಾಜಿನ ಮೇಲೆಯೂ ಗೌರವ ಡಾಕ್ಟರೇಟ್‌ ಪದವಿಯ ರೇಟು ಫಿಕ್ಸ್‌ ಆಗುತ್ತಿತ್ತು’ ಎಂದು ಸಿಂಪಿ ಒಳಗುಟ್ಟನ್ನು ಬಿಚ್ಚಿಡುತ್ತಾರೆ.

**

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT