ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಶ್ರಮವಿಲ್ಲದೆ ಪದವಿ ಸಂಪಾದನೆ

ಗೌರವ ಡಾಕ್ಟರೇಟ್‌ ಪದವಿ ಸಂಭ್ರಮ
Last Updated 4 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಕೋಲಾರ: ಗೌರವ ಡಾಕ್ಟರೇಟ್‌ ಕೊಡಿಸುವ ಏಜೆನ್ಸಿಗಳು ತಲೆಎತ್ತಿವೆ. ಗೌರವ ಡಾಕ್ಟರೇಟ್‌ ವ್ಯಾಪಾರದ ವಸ್ತುವಾಗಿದ್ದು, ₹ 50 ಸಾವಿರ ಕೊಟ್ಟರೆ 3 ತಿಂಗಳಲ್ಲಿ ಪದವಿ ಸಿಗುತ್ತದೆ.

ಜಿಲ್ಲೆಯಲ್ಲಿ ವರ್ಷಕ್ಕೆ ಸರಾಸರಿ 30 ಮಂದಿ ಖಾಸಗಿ ಏಜೆನ್ಸಿಗಳ ಮೂಲಕ ಗೌರವ ಡಾಕ್ಟರೇಟ್‌ ಪದವಿ ಪಡೆಯುತ್ತಿದ್ದಾರೆ. ಸಾಕಷ್ಟು ಮಂದಿ ಘನತೆಗಾಗಿ ಈ ಪದವಿಯ ಬೆನ್ನತ್ತಿದ್ದು, ಖಾಸಗಿ ಏಜೆನ್ಸಿಯವರು ಇದನ್ನೇ ಬಂಡವಾಳ ಮಾಡಿಕೊಂಡು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ.

ಮಾಜಿ ಸಂಸದರು, ಮಾಜಿ ಶಾಸಕರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ವ್ಯಾಪಾರಿಗಳು, ಪತ್ರಕರ್ತರು, ಗುತ್ತಿಗೆದಾರರು, ಸಾಹಿತಿಗಳು, ರಾಜಕಾರಣಿಗಳ ಹಿಂಬಾಲಕರು, ವಕೀಲರು, ಗ್ರಾಮ ಪಂಚಾಯಿತಿ ಸದಸ್ಯರು ಸಂಶೋಧನೆಯ ಶ್ರಮವಿಲ್ಲದೆ ಅನಾಯಾಸವಾಗಿ ಗೌರವ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.

ಖಾಸಗಿ ಏಜೆನ್ಸಿಯವರು ಜರ್ಮನಿಯ ಇಂಟರ್‌ನ್ಯಾಷನಲ್‌ ಪೀಸ್‌ ಯುನಿವರ್ಸಿಟಿ, ಇಂಡಿಯನ್‌ ವರ್ಚ್ಯೂಲ್‌ ಅಕಾಡೆಮಿ ಫಾರ್‌ ಪೀಸ್‌ ಅಂಡ್‌ ಎಜುಕೇಶನ್‌ (ಐವಿಯುಪಿ), ಗೋವಾ, ಪುದುಚೇರಿ ಹಾಗೂ ತಮಿಳುನಾಡಿನ ಖಾಸಗಿ ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್‌ ಪದವಿ ಕೊಡಿಸುತ್ತಿದ್ದಾರೆ.

ಈ ಗೌರವಕ್ಕೆ ಪಾತ್ರರಾದವರು ಪ್ರಚಾರಕ್ಕಾಗಿ ಸ್ಥಳೀಯ ಸಂಘ ಸಂಸ್ಥೆಗಳಿಗ ಹಣ ಕೊಟ್ಟರು ಸನ್ಮಾನ ಮಾಡಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಸ್ನೇಹಿತರು ಹಾಗೂ ಸಂಬಂಧಿಕರಿಗೆ ಪಾರ್ಟಿಯನ್ನು ಆಯೋಜಿಸುತ್ತಿದ್ದಾರೆ. ಮಾಜಿ ಸಂಸದರ ಹಿಂಬಾಲಕರೊಬ್ಬರು ಗೌರವ ಡಾಕ್ಟರೇಟ್‌ ಪದವಿ ಪಡೆದ ಕಾರಣಕ್ಕೆ ಸ್ನೇಹಿತರು ಹಾಗೂ ಆಪ್ತರಿಗೆ ನಾಲ್ಕೈದು ದಿನಗಳ ಹಿಂದೆ ಜಿಲ್ಲಾ ಕೇಂದ್ರದಲ್ಲಿ ಪಾರ್ಟಿಯನ್ನು ಆಯೋಜಿಸಿ, ಸಂಭ್ರಮಿಸಿದ್ದರು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT