ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು

7

ಹೊಸಪೇಟೆ: ಭಾರತ ಬಂದ್ ಪರಿಣಾಮ‌ ರಸ್ತೆಗಿಳಿದಿಲ್ಲ ಸಾರಿಗೆ ಸಂಸ್ಥೆಯ ಬಸ್‌ಗಳು

Published:
Updated:

ಹೊಸಪೇಟೆ:  ಭಾರತ ಬಂದ್ ಪರಿಣಾಮ‌ ಸಾರಿಗೆ ಸಂಸ್ಥೆಯ ಬಸ್‌ಗಳು ರಸ್ತೆಗಿಳಿದಿಲ್ಲ. ಬಸ್‌ಗಳು ಡಿಪೊದಲ್ಲೇ ನಿಂತಿದ್ದು ವಿವಿಧ ಕಡೆ ತೆರಳಬೇಕಿರುವ ಪ್ರಯಾಣಿಕರು ಬಸ್ಸಿನ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದಾರೆ. ಪರ ಊರಿನಿಂದ ಬರುವ ಬಸ್‌ಗಳು ಕೂಡ ನಿಲ್ದಾಣಕ್ಕೆ‌ ಬಂದು ಇಲ್ಲೇ‌ ನಿಲ್ಲುತ್ತಿವೆ.

ಆಟೊ, ಖಾಸಗಿ ಮಿನಿ ಬಸ್ಸುಗಳು ಎಂದಿನಂತೆ ಸಂಚರಿಸುತ್ತಿವೆ. 
'ಹೊಸಪೇಟೆಯಿಂದ ಪರ ಊರುಗಳಿಗೆ ತೆರಳಬೇಕಿದ್ದ ಬಸ್ಸುಗಳು ಬೆಳಿಗ್ಗೆ ಆರು ಗಂಟೆಗೆ ಹೊರಟಿವೆ. ಏಳು ಗಂಟೆ ಬಳಿಕ ಯಾವುದೇ ಬಸ್ಸುಗಳನ್ನು ಬಿಟ್ಟಿಲ್ಲ. ಎಂದು ನಿಲ್ದಾಣದ ಅಧಿಕಾರಿ ಉಮಾ ಮಹೇಶ್ವರ ತಿಳಿಸಿದರು.

ಶಾಲಾ, ಕಾಲೇಜುಗಳಿಗೆ ಭಾನುವಾರ ಸಂಜೆಯೇ ರಜೆ‌ ಘೋಷಿಸಿರುವ ಕಾರಣ ಶಿಕ್ಷಣ ಸಂಸ್ಥೆಗಳು ಬಾಗಿಲು ತೆರೆದಿಲ್ಲ. ಪ್ರಮುಖ ರಸ್ತೆಗಳಲ್ಲಿ ಜನಸಂಚಾರ ವಿರಳವಾಗಿದ್ದು ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿವೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !