ಭಾನುವಾರ, ಆಗಸ್ಟ್ 18, 2019
26 °C

ಮನೆ ಕುಸಿದು ತಾಯಿ, ಒಂದು ವರ್ಷದ ಮಗು ದುರ್ಮರಣ

Published:
Updated:

ಚನ್ನಗಿರಿ: ತಾಲ್ಲೂಕಿನ ಹೊದಿಗೆರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ಮನೆ ಕುಸಿದುಬಿದ್ದ ಪರಿಣಾಮ ತಾಯಿ ಹಾಗೂ ಒಂದು ವರ್ಷದ ಮಗ ಮೃತಪಟ್ಟಿದ್ದಾರೆ.

ಹೊದಿಗೆರೆ ಗ್ರಾಮದ ಉಮಾ ಕುಮಾರ್ (30) ಹಾಗೂ ಅವರ ಮಗ ಧನುಷ್ ಮೃತರು.

ನಾಲ್ಕೈದು ದಿನಗಳ ಹಿಂದೆ ಸತತವಾಗಿ ಮಳೆ ಸುರಿದಿತ್ತು. ಎರಡು ದಿನಗಳಿಂದ ಮಳೆಯಾಗುತ್ತಿರಲಿಲ್ಲ. ಆದರೆ, ಈ ಹಿಂದೆ ಬಿದ್ದ ಮಳೆಗೆ ಮಣ್ಣಿನ ಗೋಡೆ ನೆನೆದಿತ್ತು. ಮಂಗಳವಾರ ರಾತ್ರಿ ಏಕಾಏಕಿ ಮನೆ ಕುಸಿದು ಬಿದ್ದಿದೆ. ಗಾಯಗೊಂಡ ತಾಯಿ ಹಾಗೂ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗಿನಜಾವ ಇಬ್ಬರೂ ಮೃತಪಟ್ಟಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)