ಹೊಯ್ಸಳರ ನಿಸಿಧಿ ಶಾಸನ ಶಿಲ್ಪ ಪತ್ತೆ

7

ಹೊಯ್ಸಳರ ನಿಸಿಧಿ ಶಾಸನ ಶಿಲ್ಪ ಪತ್ತೆ

Published:
Updated:
Deccan Herald

ಶಿವಮೊಗ್ಗ: ತಾಲ್ಲೂಕಿನ ಹರಕೆರೆ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದ ಮುಂಬಾಗದಲ್ಲಿ ನಿಸಿಧಿ ಶಾಸನ ಶಿಲ್ಪ ಪತ್ತೆಯಾಗಿದ್ದು, ಇದು 60 ಸೆಂ.ಮೀ. ಉದ್ದ, 15 ಸೆಂ.ಮೀ. ಅಗಲವಿದ್ದು, ಸಿಸ್ಟ್ ಶಿಲೆಯಿಂದ ಕೂಡಿದೆ. ಶಾಸನ ಎಂಟು ಸಾಲಿನದ್ದಾಗಿದ್ದು, ಅಲ್ಲಲ್ಲಿ ಹಾಳಾಗಿದೆ.

ಶಿವಪ್ಪ ನಾಯಕ ಅರಮನೆ  ಸಹಾಯಕ ನಿರ್ದೇಶಕ ಆರ್ಶೇಜೇಶ್ವರ, ಡಾ. ಜಗದೀಶ್ ಕ್ಷೇತ್ರ ಕಾರ್ಯ ಕೈಗೊಂಡಾಗ ಈ ಶಾಸನ ಪತ್ತೆಯಾಗಿದೆ.

ಶಿಲ್ಪದ ಮಹತ್ವ: ನಿಸಿಧಿ ಶಾಸನ ಶಿಲ್ಪವು ಸಲ್ಲೇಖನ ವ್ರತವನ್ನು ತೆಗೆದುಕೊಡಿರುವ ವಿವರವನ್ನು ಒಳಗೊಂಡಿದೆ. ಶಿಲ್ಪದ ಮಧ್ಯೆ ಜಿನಬಿಂಬ ನಿಂತಿದ್ದು, ಈ ಬಿಂಬದ ಮೇಲೆ ಮುಕ್ಕೊಡೆ ಚಾಮರಗಳನ್ನು, ಸೂರ್ಯ–ಚಂದ್ರರನ್ನು ಚಿತ್ರಿಸಲಾಗಿದೆ.

ಶಾಸನದ ಮಹತ್ವ: ಈ ನಿಸಿಧಿ ಶಿಲ್ಪದಲ್ಲಿರುವ ಶಾಸನವು ಲಿಪಿಯ ಆಧಾರದ ಮೇಲೆ ಹೊಯ್ಸಳರ ಕಾಲದ್ದೆನ್ನಲಾಗಿದೆ. 8 ಸಾಲುಗಳಿದ್ದು, ಹಳಗನ್ನಡದಲ್ಲಿದೆ. ಶಾಸನ ಹಾಳಾಗಿದ್ದು, ಸಂಪೂರ್ಣ ವಿವರ ಸಿಗುವುದು ಕಷ್ಟ ಎನ್ನಲಾಗುತ್ತಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !