ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಗಾಂಧಿ ಹತ್ಯೆಗೂ ಮುನ್ನ ಬೆಂಗಳೂರಿಗೆ ಬಂದಿದ್ದ ಗೋಡ್ಸೆ’: ಎಚ್.ಎಸ್. ದೊರೆಸ್ವಾಮಿ

Last Updated 29 ಸೆಪ್ಟೆಂಬರ್ 2019, 9:54 IST
ಅಕ್ಷರ ಗಾತ್ರ

ಬೆಂಗಳೂರು:‘ಗಾಂಧಿ ಹತ್ಯೆಗೂ ಸುಮಾರು ಹದಿನೈದು ದಿನ ಮುನ್ನ ನಾಥೂರಾಂ ಗೋಡ್ಸೆ ಬೆಂಗಳೂರಿಗೆ ಬಂದಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿದ್ದ ಅವರು, ಸಮಾವೇಶದ ಸ್ವಾಗತ ಸಮಿತಿಯ ಅಧ್ಯಕ್ಷರ ಮನೆಯಲ್ಲಿಯೇ ಉಳಿದುಕೊಂಡಿದ್ದರು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಹೇಳಿದರು.

ನಗರದಲ್ಲಿ ಭಾನುವಾರ ಡಿ.ಎಸ್. ನಾಗಭೂಷಣ್‌ ಅವರ ‘ಗಾಂಧಿ ಕಥನ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಾಂಧಿ ಹತ್ಯೆ ನಂತರ, ಗೋಡ್ಸೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಸಂಘದವರು ಹೇಳುತ್ತಾರೆ. ಆದರೆ, ಗೋಡ್ಸೆ ಆರ್‌ಎಸ್‌ಎಸ್‌ಗೆ ಸೇರಿದವರೇ ಎನ್ನಲು ಹಲವು ಸಾಕ್ಷ್ಯಗಳಿವೆ’ ಎಂದು ಹೇಳಿದರು.

ಇದನ್ನೂ ಓದಿ:'ಜೈ ಶ್ರೀರಾಮ್‌ ಎಂಬ ಹಿಂಸೆಯೂ, ಹೇ ರಾಮ್‌ ಎಂಬ ಅಹಿಂಸೆಯೂ’: ದೇವನೂರ ಮಹಾದೇವ

‘ಸ್ವಾತಂತ್ರ್ಯ ನಂತರ ಕಾಂಗ್ರೆಸ್‌ ವಿಸರ್ಜಿಸಬೇಕು ಎಂದು ಗಾಂಧಿ ಹೇಳಿದ್ದು ನಿಜ. ಆದರೆ, ಕಾಂಗ್ರೆಸ್‌ ವಿಸರ್ಜಿಸಿ, ಲೋಕ ಸೇವಾ ದಳ ಎಂಬ ಸಂಘ ರಚಿಸಿಕೊಂಡು ಆಳುವವರನ್ನು ತಿದ್ದುವ ಕೆಲಸವನ್ನು ಮಾಡಬೇಕು ಎಂಬ ಉದ್ದೇಶ ಗಾಂಧಿಯವರಿಗಿತ್ತು. ಆದರೆ, ಮೋದಿಯವರು ಈ ವಾಕ್ಯವನ್ನು ಪೂರ್ಣವಾಗಿ ಹೇಳದೆ, ಕಾಂಗ್ರೆಸ್‌ ವಿಸರ್ಜಿಸಲು ಗಾಂಧಿ ಹೇಳಿದ್ದರು ಎಂಬುದಷ್ಟನ್ನೇ ವೈಭವೀಕರಿಸುತ್ತಿದ್ದಾರೆ’ ಎಂದು ದೊರೆಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT