ಬುಧವಾರ, ನವೆಂಬರ್ 20, 2019
27 °C
50 ದಿನಗಳಲ್ಲಿ 194 ಗಂಟೆ ವಿಮಾನ ಕಾರ್ಯಾಚರಣೆ

ವಾಡಿಕೆಗಿಂತ ಹೆಚ್ಚು ಮಳೆಯಾಗಿರುವ ಜಿಲ್ಲೆಗಳಲ್ಲೂ ಸದ್ದಿಲ್ಲದೆ ಮೋಡ ಬಿತ್ತನೆ

Published:
Updated:
Prajavani

ಹುಬ್ಬಳ್ಳಿ: ಮಳೆಯ ಅಬ್ಬರದ ನಡುವೆಯೂ ವರ್ಷಧಾರೆ ಯೋಜನೆಯಡಿ ಉತ್ತರ ಕರ್ನಾಟಕ ಭಾಗದಲ್ಲಿ 50 ದಿನಗಳಿಂದ ಮೋಡ ಬಿತ್ತನೆ ಕಾರ್ಯ ನಡೆದಿದೆ. ವಾಡಿಕೆಗಿಂತ ಕಡಿಮೆ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವ ಜಿಲ್ಲೆಗಳಲ್ಲೂ ಮೋಡ ಬಿತ್ತನೆ ಮಾಡಲಾಗಿದೆ.

ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ವಿಮಾನಗಳು 194 ಗಂಟೆ ಬಿತ್ತನೆಗಾಗಿ ಹಾರಾಟ ನಡೆಸಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚರಣಾ ಕೇಂದ್ರದಲ್ಲಿ ದಾಖಲಾಗುವ ಮಳೆ ಪ್ರಮಾಣದ ಅಂಕಿ– ಅಂಶಗಳನ್ನೇ ಮೋಡ ಬಿತ್ತನೆ ನಂತರ ಆದ ಮಳೆಯೆಂದು ಪರಿಗಣಿಸಲಾಗುತ್ತಿದೆ. ಆ ದಾಖಲೆ ಪ್ರಕಾರ ನಾಲ್ಕೈದು ದಿನ ಬಿಟ್ಟರೆ, ಉಳಿದ ದಿನಗಳಲ್ಲಿ 6 ಮಿ.ಮೀ ನಿಂದ 58 ಮಿ.ಮೀ ವರೆಗೂ ಮಳೆಯಾಗಿದೆ.

‘ಕ್ಯಾತಿ ಕ್ಲೈಮೇಟ್‌ ಮಾಡಿಫಿಕೇಷನ್‌ ಕನ್ಸ್‌ಲ್ಟೆಂಟ್‌ ಸಂಸ್ಥೆಯು ಮೋಡ ಬಿತ್ತನೆ ಗುತ್ತಿಗೆ ಪಡೆದಿದೆ. ಇದಕ್ಕೆ ₹45 ಕೋಟಿ ನೀಡುತ್ತಿದ್ದು, ಒಪ್ಪಂದದ ಪ್ರಕಾರ 90 ದಿನಗಳಲ್ಲಿ 400 ಗಂಟೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ವಾರದಲ್ಲಿ ನಾಲ್ಕರಿಂದ ಆರು ದಿನ ಕಾರ್ಯಾಚರಣೆ ನಡೆದಿದೆ’ ಎನ್ನುತ್ತಾರೆ ವರ್ಷಧಾರೆ ನೋಡಲ್‌ ಅಧಿಕಾರಿ ಮಂಜುನಾಥ.

ಹಾವೇರಿ, ಗದಗ, ಬಳ್ಳಾರಿ, ಬೆಳಗಾವಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕಲಬುರ್ಗಿ ಜಿಲ್ಲೆಗಳಲ್ಲಿ ಮೋಡ ಬಿತ್ತನೆ
ನಡೆದಿದೆ. ಸೆ.19 ರಂದು ಜಮಖಂಡಿ, ಬೀಳಗಿ, ವಿಜಯಪುರ ಜಿಲ್ಲೆಯ ವಿಜಯಪುರ, ಇಂಡಿಗಳಲ್ಲಿ ಮೋಡ ಬಿತ್ತನೆ ನಡೆದಿದೆ. ಬಿತ್ತನೆ ನಡೆಸಿದ ದಿನ ಕೆಲ ತಾಲ್ಲೂಕುಗಳಲ್ಲಿ ಮಳೆಯಾಗಿದ್ದು, ಬಿತ್ತನೆಯಿಂದಲೇ ಮಳೆಯಾಗಿದೆಯೇ ಎಂಬುದು ಖಚಿತವಿಲ್ಲ.

ಪ್ರತಿಕ್ರಿಯಿಸಿ (+)