ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ ಆವರಣದಲ್ಲೇ ಶ್ರೀಗಂಧ ಕಳವು

Last Updated 22 ಫೆಬ್ರುವರಿ 2019, 19:04 IST
ಅಕ್ಷರ ಗಾತ್ರ

ಹುಣಸೂರು: ನಗರದ ಅರಣ್ಯ ಇಲಾಖೆ ಆವರಣದಲ್ಲಿ ಬೆಳೆದಿದ್ದ ದೊಡ್ಡ ಗಾತ್ರದ ಶ್ರೀಗಂಧ ಮರವನ್ನು ಗುರುವಾರ ರಾತ್ರಿ ಕಳವು ಮಾಡಲಾಗಿದೆ.

ಪ್ರಾದೇಶಿಕ ಅರಣ್ಯ ಇಲಾಖೆಗೆ ಸೇರಿದ ನರ್ಸರಿ ವಿಭಾಗದ ಬಳಿ ಮರ ಬೆಳೆದಿತ್ತು. ಮರಕ್ಕೆ ಸುಮಾರು 25 ವರ್ಷಗಳಾಗಿತ್ತು. ಇದರ ಕಾಂಡ 65ರಿಂದ 70 ಸೆ.ಮೀ ಸುತ್ತಳತೆ ಹೊಂದಿತ್ತು. ಅರಣ್ಯ ಇಲಾಖೆ ಆವರಣದಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಕೃತ್ಯ ನಡೆದಿರುವುದು ಸಂಶಯಕ್ಕೆ ಕಾರಣ ವಾಗಿದೆ. ಈ ಹಿಂದೆಯೂ ಇದೇ ಆವರಣದ ಗೋದಾಮಿನಲ್ಲಿ ಸಂಗ್ರಹಿಸಿದ್ದ ಶ್ರೀಗಂಧದ ತುಂಡುಗಳನ್ನು ಕಳವು ಮಾಡಲಾಗಿತ್ತು. ಡಿಸಿಎಫ್‌ ವಸತಿ ಗೃಹದಲ್ಲಿ ಸುಮಾರು 60 ವರ್ಷಗಳ ಭಾರಿ ಗಾತ್ರದ ಶ್ರೀಗಂಧದ ಮರಗಳು ಬೆಳೆದಿದ್ದು, ಅವುಗಳಿಗೆ ತಗಡಿನ ಹೊದಿಕೆಗಳನ್ನು ಹಾಕಿ ರಕ್ಷಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT