ಸೇತುವೆ ಮಂಜೂರಿಗೆ ನೆಪ

7
ವಿಧಾನಸಭಾ ಅಂದಾಜು ಸಮಿತಿ ಅಸಮಾಧಾನ

ಸೇತುವೆ ಮಂಜೂರಿಗೆ ನೆಪ

Published:
Updated:

ಬೆಂಗಳೂರು: ಶಾಸಕರು ಕೋರಿಕೆ ಸಲ್ಲಿಸಿದ್ದರೂ ರಾಜ್ಯದಲ್ಲಿ 195 ಸೇತುವೆಗಳ ಪೈಕಿ ಒಂದೂ ಸೇತುವೆ ಮಂಜೂರಾಗಿಲ್ಲ ಎಂದು ವಿಧಾನಸಭೆಯ ಅಂದಾಜು ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಲೋಕೋಪಯೋಗಿ, ಬಂದರು ಹಾಗೂ ಒಳನಾಡು ಜಲಸಾರಿಗೆಗೆ ಸಂಬಂಧಿಸಿದ ಸಮಿತಿಯ ಏಳನೇ ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

‘ಕೆಲವು ಕ್ಷೇತ್ರಗಳಲ್ಲಿ ಹಲವು ಕಡೆಗಳಲ್ಲಿ ಸೇತುವೆಗಳನ್ನು ನಿರ್ಮಿಸಬೇಕಿದೆ. ಶಾಸಕರ ಕೋರಿಕೆಗೆ ಅನುಮೋದನೆ ಸಿಕ್ಕಿದೆ. ಅಧಿಕಾರಿಗಳು ಸಾಧ್ಯತಾ ವರದಿಯ ನೆಪ ಹೇಳಿ ವಿಳಂಬ ಮಾಡುತ್ತಿದ್ದಾರೆ’ ಎಂದು ಸಮಿತಿ ಆಕ್ಷೇಪಿಸಿದೆ.

ಹೆದ್ದಾರಿಗಳಲ್ಲಿ ಟೋಲ್‌ನವರು ರಸ್ತೆ ಶುಲ್ಕ ಸಂಗ್ರಹಿಸುತ್ತಿದ್ದಾರೆ. ಆದರೆ, ರಸ್ತೆಗಳ ನಿರ್ವಹಣೆ ಮಾಡುತ್ತಿಲ್ಲ. ಶುಲ್ಕ ಸಂಗ್ರಹ ಮಾಡುವವರೇ ರಸ್ತೆಗಳ ನಿರ್ವಹಣೆ ಮಾಡಬೇಕು ಎಂದು ಸಮಿತಿ ಸೂಚಿಸಿದೆ.

ಗುರುತಿನ ಚೀಟಿ ಅಳವಡಿಸಿದ್ದರೂ ಶಾಸಕರ ವಾಹನಗಳಿಗೆ ಟೋಲ್‌ ಸಂಗ್ರಹ ಕೇಂದ್ರಗಳಲ್ಲಿ ಅಡ್ಡಿ ಉಂಟು ಮಾಡಲಾಗುತ್ತಿದೆ. ನೈಸ್‌ ರಸ್ತೆಗಳಲ್ಲೂ ಇಂತಹ ಪ್ರವೃತ್ತಿ ಕಂಡುಬಂದಿದೆ. ಹಿರಿಯೂರು, ಹೊಸಪೇಟೆ ಹೆದ್ದಾರಿ, ತುಮಕೂರು–ಬೆಂಗಳೂರು ಟೋಲ್‌, ದೇವನಹಳ್ಳಿ ಹಾಗೂ ಹೊಸಕೋಟೆ ಟೋಲ್‌ಗಳಲ್ಲಿ ಅಲ್ಲಿನ ಸಿಬ್ಬಂದಿ ಸಾರ್ವಜನಿಕರ ಎದುರಿನಲ್ಲೇ ಶಾಸಕರಿಗೆ ಮುಜುಗರವಾಗುವಂತೆ ವರ್ತಿಸುತ್ತಿದ್ದಾರೆ ಎಂದು ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !